ಮಂಗಳೂರು: ಸ್ಲಂನಲ್ಲಿರುವ ಜನರ ಬಗ್ಗೆ ಹಾಗೂ ಸ್ಲಂ ಜಾಗಗಳ ಮಾಹಿತಿ ಕೇಳಿ ಇನ್ನು ಮುಂದೆ ಯಾವ ರೀತಿಯ ಸ್ಲಂಗಳಲ್ಲಿ ಕೆಲಸಗಳನ್ನು ನಿರ್ವಹಿಸಬಹುದು ಅನ್ನುವುದರ ಬಗ್ಗೆ ಸ್ಲಂ ಮೋರ್ಚಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಶೆಟ್ಟಿ ಮಂಗಳೂರಿನ ಸ್ಲಂ ಮೋರ್ಚಾಕ್ಕೆ ಭೇಟಿ ಮಾಡಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ಲಂ ಮೋರ್ಚಾದ ಜಿಲ್ಲಾಧ್ಯಕ್ಷರಾದ ರಮಾ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ತುಪ್ಪೆಕಲ್ಲು, ಉಪಾಧ್ಯಕ್ಷರಾದ ಚೇತಕ್ ಪೂಜಾರಿ, ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

