ಮಂಗಳೂರು: ಸ್ವಾವಲಂಬಿ ಜೀವನ ನಡೆಸಲು ಸ್ವ ಸಹಾಯ ಸಂಘದ ಸದಸ್ಯರು ಸ್ವ ಉದ್ಯೋಗ ನಡೆಸುವಂತೆ ಪ್ರೇರೇಪಿಸುವ ಅಗತ್ಯ ಎಂದು ದಿಶಾ ಸಂಸ್ಥೆಯ ನಿರ್ದೇಶಕರಾದ ಶ್ರೀ ಸಿಲ್ವೆಸ್ಟರ್ ಡಿ ಸೋಜ ಹೇಳಿದರು.
ಅವರು ಭಾರತ ಸರಕಾರದ ದತ್ತೋಪಂತ್ ಧೇಂಗಡಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ ಮಂಗಳೂರು ಮತ್ತು ದಿಶಾ ಟ್ರಸ್ಟ್ (ರಿ) ಇವರ ಜಂಟಿ ಆಶ್ರಯದಲ್ಲಿ ನಡೆದ ಅಸಂಘಟಿತ ಕಾರ್ಮಿಕರ 02 ದಿನದ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತರಭೇತಿ ಕಾರ್ಯಗಾರವನ್ನು ಕುಪ್ಪೆಪದವು ಶ್ರೀಮತಿ ಆಶಾಲತ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕಾರ್ಮಿಕ ಕಲ್ಯಾಣ ಮಂಡಳಿಯ ಶಿಕ್ಷಣಾಧಿಕಾರಿ ಶ್ರೀಸತೀಶ್ ಕುಮಾರ್ ಸರಕಾರದ ವಿವಿಧ ಯೋಜನೆಗಳ ಕುರಿತು ಮಾತನಾಡಿದರು. ರಾಜ್ಯ ಮಟ್ಟದ ತರಬೇತುದಾರರಾದ ಶ್ರೀಮತಿ ಹರಿಣಾ ಜಯಪ್ರಕಾಶ್ ರಾವ್ ಮತ್ತು ಅಫೋಲಿನ್ ಮೆಂಡೋಸ್ ಆರ್ಟಿಫಿಸಿಯಲ್ ಜ್ಯುವೆಲ್ಲರಿ ತಯಾರಿ ಕುರಿತು ತರಬೇತಿ ನೀಡಿದರು. ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಜಕ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯಕರ್ತೆಯರಾದ ಶ್ರೀಮತಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ವಿನೋದ ಸ್ವಾಗತಿಸಿ ಶ್ರೀಮತಿ ರಂಜಿನಿ ವಂದಿಸಿದರು.

