ಮಂಗಳೂರು: “ಒಂದು ದಿನದ ವಿನ್ಯಾಸ ಮತ್ತು ಆವಿಷ್ಕಾರ ಕಾರ್ಯಾಗಾರ” ಮಂಗಳೂರಿನ ಪ್ರತಿಷ್ಠಿತ ಪಿ ಎ ತಾಂತ್ರಿಕ ವಿದ್ಯಾಲಯದಲ್ಲಿ ಅ. 25 ಮಂಗಳವಾರದಂದು ಜರುಗಿತು. ಈ ಕಾರ್ಯಕ್ರಮವು ಭಾರತ ಸರಕಾರದ “ಗುಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಮಂತ್ರಾಲಯ -ಸೆಂಟರ್ ಆಫ್ಎಕ್ಸೆಲ್ಲೆನ್ಸ್, ಭಾರತೀಯ ವೈಜ್ಞಾನಿಕಸಂಸ್ಥೆ (ಐಐಎಸ್ಸಿ), ಬೆಂಗಳೂರು” ಮತ್ತು “ಸೆಂಟರ್ ಆಫ್ ಎಕ್ಸೆಲ್ಲೆನ್ಸ್ ಫಾರ್ ರಿಸರ್ಚ್ ಅಂಡ್ ಇನ್ನೊವೇಷನ್- ಪಿ ಎ ತಾಂತ್ರಿಕ ವಿದ್ಯಾಲಯದ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಉದ್ದೇಶವು ತಾಂತ್ರಿಕ ವಿದ್ಯಾರ್ಥಿಗಳಿಗೆ ವಿನ್ಯಾಸ ಮತ್ತು ನಾವೀನ್ಯತೆಯ ಶಕ್ತಿ ಬಗ್ಗೆ ಸಾಮಾನ್ಯ ಅರಿವು ಮತ್ತು ಸಂವೇದನಾಶೀಲತೆಯನ್ನುಮೂಡಿಸುವುದಾಗಿತ್ತು.ಇದರೊಂದಿಗೆ ಎಂಎಸ್ಎಂಇ ಸಚಿವಾಲಯದ ಹೊಸ ಪರಿಕಲ್ಪನೆಗಳನ್ನು,ನಾವೀನ್ಯತೆ, ಹಣಕಾಸಿನ ನೆರವು,IPಖ (ಬೌದ್ಧಿಕ ಆಸ್ತಿ ಹಕ್ಕುಗಳ),ಮಾರ್ಕೆಟಿಂಗ್ನೆರವು ಮತ್ತು ಗುಣಮಟ್ಟ ನಿರ್ವಹಣಾ ಕಾರ್ಯಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಬೋಧನಾ ವಿಭಾಗದ ಸದಸ್ಯರಿಗೆ ತಿಳಿಯಪಡಿಸುವುದಾಗಿತ್ತು.
ಔಪಚಾರಿಕ ಉದ್ಘಾಟನಾ ಕಾರ್ಯಕ್ರಮವು ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಬೆಳಿಗ್ಗೆ 09:30 ರಿಂದ 10:00ರ ಸಮಯದಲ್ಲಿ ನಡೆಯಿತು. ಕ್ಕಾರ್ಯಕ್ರಮವು ಮುಖ್ಯ ಅತಿಥಿ – ಶ್ರೀ ಶ್ರೀನಿವಾಸ್ ಎಂ ಜಮಖಂಡಿ ನಿರ್ದೇಶಕ, ಎಂಎಸ್ಎಂಇ ಸೆಂಟರ್ ಆಫ್ ಎಕ್ಸೆಲೆನ್ಸ್, ಐಐಎಸ್ಸಿ – ಬೆಂಗಳೂರು, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆನಂದಮೂರ್ತಿಹೆಚ್ ವಿ- ಉಪ ನಿರ್ದೇಶಕರು, ಎಂಎಸ್ಎಂಇ ಸೆಂಟರ್ ಆಫ್ ಎಕ್ಸೆಲೆನ್ಸ್, ಐಐಎಸ್ಸಿ – ಬೆಂಗಳೂರು, ಶ್ರೀ ಕೆ ಸಾಕ್ರಟೀಸ್ ಉಪ ನಿರ್ದೇಶಕರು, ಶಾಖೆ ಎಂಎಸ್ಎಂಇ ಡಿಐ -. ಮಂಗಳೂರು, ಶ್ರೀ ಸುಂದರ್ ಎಸ್.ಎಂ. ಸಹಾಯಕ ನಿರ್ದೇಶಕ, ಶಾಖೆ ಎಂಎಸ್ಎಂಇ ಡಿಐ -. ಮಂಗಳೂರು, ಅಧ್ಯಕ್ಷತೆ ಅತಿಥಿ – ಡಾ ಅಬ್ದುಲ್ ಶರೀಫ್ ಪ್ರಿನ್ಸಿಪಾಲ್, ಪಿ ಎ ತಾಂತ್ರಿಕ ವಿದ್ಯಾಲಯ ಡಾ.ಆಂಟನಿ ಎಜೆ ಡೀನ್ ವಿದ್ಯಾರ್ಥಿ ಸಂಗತಿಗಳು, ಪಿ ಎ ತಾಂತ್ರಿಕ ವಿದ್ಯಾಲಯ, ಕಾರ್ಯಕಾರಿ ಸಮಿತಿ ಸದಸ್ಯರು ಪ್ರೊ.ಸರ್ಫರಾಜ್ ಹಸೀಮ್ ನಿರ್ದೇಶಕ ಶೈಕ್ಷಣಿಕ, ಪಿ ಎ ತಾಂತ್ರಿಕ ವಿದ್ಯಾಲಯ, ಡಾ. ರಮಿಸ್ ಎಂಕೆ ವೈ ಪ್ರಿನ್ಸಿಪಾಲ್ – ಪಿ ಎ ತಾಂತ್ರಿಕ ವಿದ್ಯಾಲಯ ಮತ್ತು ಡಾ.ಜಾಹೀದ್ಅನ್ಸಾರಿ ಡೀನ್ ಸಂಶೋಧನೆ, ಪಿ ಎ ತಾಂತ್ರಿಕ ವಿದ್ಯಾಲಯ ಹಾಗೂ ಮಂಗಳೂರು ಪ್ರದೇಶದ ತಾಂತ್ರಿಕ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀನಿವಾಸ್ ಎಂ ಜಮಖಂಡಿ ಉಲ್ಲೇಖಿಸಿ “ವಿದ್ಯಾರ್ಥಿಗಳು ನಾಳೆಯ ವಜ್ರಗಳು” ಹಾಗೂ ಪಿ. ಎ. ಕಾಲೇಜಿನ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಉದ್ಘಾಟನಾ ಭಾಷಣವನ್ನು ಮಾಡಿದರು. ಅವರು ಕಾರ್ಯಕ್ರಮದ ಬ್ಯಾನರ್ಉದ್ಘಾಟಿಸುವ ಮೂಲಕ ಕಾರ್ಯಗರಕ್ಕೆ ಚಾಲನೆ ನೀಡಿದರು.ಉದ್ಘಾಟನಾ ಕಾರ್ಯಕ್ರಮದ ನಂತರ ಕಾರ್ಯಕ್ರಮದ ಪ್ರಥಮ ಹಾಗೂ ದ್ವಿತೀಯ ಅಧಿವೇಶನಗಳನ್ನು 10:30ಕ್ಕೆ ಆರಂಭಿಸಲಾಯಿತು. ಶ್ರೀ ಶ್ರೀನಿವಾಸ್ ಎಂ ಜಮಖಂಡಿಯವರ ಸಾರಥ್ಯದಲ್ಲಿ ಬೆಳಗಿನ ಅಧಿವೇಶನವು ಸಂಪೂರ್ಣವಾಗಿ ಪರಸ್ಪರ ಪಾಲ್ಗೊಳ್ಳುವಿಕೆಯ ಮೂಲಕ ಸಮಾಪ್ತಿಗೊಂಡಿತು. ಮಧ್ಯಾನದ ಅಧಿವೇಶನವು ಶ್ರೀ ಸುಂದರ್ ಎಸ್ ಎಂಅವರ ಸಾರಥ್ಯದಲ್ಲಿ ಜರುಗಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭ ಮಧ್ಯಾಹ್ನದ ಅಧಿವೇಶನದ ನಂತರ 04:00 ರಿಂದ 04:30 ರ ಸಮಯದಲ್ಲಿ ನಡೆಯಿತು. ದಿನದ ಕಾರ್ಯಕ್ರಮದ ವರದಿ ಕೇಳಿದ ನಂತರ ಸಂಪನ್ಮೂಲ ವ್ಯಕ್ತಿಗಳಿಗೆಶ್ರೀ ಅಬ್ದುಲ್ಲಾ ಇಬ್ರಾಹಿಂ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು. ಅವರು ವಿದ್ಯಾರ್ಥಿಗಳು ಮತ್ತು ಬೋಧನಾ ವಿಭಾಗದ ಸದಸ್ಯರು ನವೀನ ಚಿಂತನೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆಮತ್ತು ಈ ಉದ್ದೇಶಕ್ಕೆ ಆಡಳಿತ ವರ್ಗದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆನೀಡಿದರು. ಡಾ ಅಬ್ದುಲ್ ಶರೀಫ್ ಅಧ್ಯಕ್ಷತೆ ಹೇಳಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಮೂಲ ತತ್ವಗಳ ಗ್ರಹಿಕೆಯನ್ನು ಹೆಚ್ಚಿಸಿಕೊಳಲು ಸಲಹೆ ನೀಡಿದರು. ಡಾ ರಾಮಿಸ್ ಎಂ ಕೆ, ಭಾಗವಹಿಸಿದವರಿಗೆ ನೆನಪಿನ ಕಾಣಿಕೆಯನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು.

