ಊಟದ ನಡುವೆ
ಹೇಸಿಗೆಯ ನೆನೆದಂತೆ
ನಿನ್ನ ನೆನಪು ಕಾಡುತಿಹುದು
ಸಂತೃಪ್ತ ಬಾಳಿನಲಿ...
ಆರಿ ಹೋದ ಬೆಳಕೊಂದಿಗೆ
ಉಸಿರು ಸೇರಿ ಹೋದರೆ
ಅದೇನೋ ಚೆನ್ನಾಗಿತ್ತು..
ಉಪವಾಸದ ಹೊಟ್ಟೆ
ನಿದ್ದೆ ಇಲ್ಲದ ಕಣ್ಣು
ಮನಸಿಲ್ಲದ ಕನಸನ್ನು
ತುಂಬಲು
ನಾನೆಷ್ಟೂ ಹಾತೊರೆದಿದ್ದೆ
ನಿನಗಂತೂ ನೆನಪಿಲ್ಲ ಬಿಡು..
ನಾನಂತೂ ಸಂತೋಷಿ ಈಗ
ಬರಿದಾದ ನೆನಪುಗಳೊಂದಿಗೆ….
ಮಾಳ ಸುಜಿತ್ ಶೆಟ್ಟಿ (ಮನಸ್ಪತಿ)


