ಮುಂಬಯಿ: ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಬಿಲ್ಲವರ ಭವನಕ್ಕೆ ಬಿಜೆಪಿ ಯುವ ನೇತಾರ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅ.23ರಂದು ಆದಿತ್ಯವಾರ ಪೂರ್ವಾಹ್ನ ಭೇಟಿ ನೀಡಿದರು.

suniel-kumar-mla3

suniel-kumar-mla-in-billawar-bhavan-2
suniel-kumar-mla-in-billawar-bhavan-5

ಸುನೀಲ್ ಕುಮಾರ್ ಮಹಾನಗರಕ್ಕಾಗಮಿಸುವಂತೆಯೇ ಬಿಲ್ಲವರ ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿಕ್ಕೆ ಆಗಮಿಸಿ ಸನ್ನಿಧಿಯಲ್ಲಿನ ನಾರಾಯಣ ಗುರು ಹಾಗೂ ಕೋಟಿಚೆನ್ನಯ ಪ್ರತಿಮೆಗಳಿಗೆ ಪುಷ್ಪಹಾರಗಳನ್ನಿತ್ತು ನಮಿಸಿದರು. ಸಾಮಾಜಿಕ ಮತ್ತು ಧಾರ್ಮಿಕ ಉಪ ಸಮಿತಿ ಕಾರ್ಯಾಧ್ಯಕ್ಷ ಮೋಹನದಾಸ್ ಜಿ.ಪೂಜಾರಿ ಪೂಜೆ ನೆರವೇರಿಸಿ ಮಹಾರತಿಗೈದರು.

suniel-kumar-mla-in-billawar-bhavan-4

suniel-kumar-mla-in-billawar-bhavan-6

ಇದೇ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಶನ್ ಪರವಾಗಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌರವ ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ ಹಾಗೂ ಭಾರತ್ ಬ್ಯಾಂಕ್‍ನ ನಿರ್ದೇಶಕ ಗಂಗಾಧರ ಜೆ.ಪೂಜಾರಿ ಅವರು ಶಾಸಕ ಸುನೀಲ್ ಕುಮಾರ್ ಮತ್ತು ಉಪಸ್ಥಿತ ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್‍ನ ನಿರ್ದೇಶಕ ಭಾಸ್ಕರ್ ಕೋಟ್ಯಾನ್ ಅವರನ್ನು ಶಾಲು ಹೊದಿಸಿ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು.

suniel-kumar-mla5

suniel-kumar-mla-in-billawar-bhavan-1

ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಥಾಣೆ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ಅಶೋಕ್ ಎಂ.ಕೋಟ್ಯಾನ್, ಘಾಟ್ಕೋಪರ್ ಸಮಿತಿಯ ಸಂಜೀವ ಪೂಜಾರಿ ತೋನ್ಸೆ, ವಿದ್ಯಾ ಉಪಸಮಿತಿಯ ವಿಶ್ವನಾಥ್ ತೋನ್ಸೆ, ಶುಭಮಂಗಳ ಉಪಸಮಿತಿ ಕಾರ್ಯಾಧ್ಯಕ್ಷೆ ಬೇಬಿ ಎಸ್.ಕುಕ್ಯಾನ್ ಸೇರಿದಂತೆ ಅಸೋಸಿಯೇಶನ್‍ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *