ಮೂಡಿಗೆರೆ: ಕಣಚೂರು ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆ ವತಿಯಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಲಾಗಿತ್ತು. ಸ್ವಾತಂತ್ರ ಹೋರಾಟಗಾರರಾಗಿದ್ದ ದಿವಂಗತ ಡಿ.ಎಸ್. ಕೃಷ್ಣಪ್ಪಗೌಡ ದಾರದಹಳ್ಳಿ ಇವರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಕಣಚೂರು ಸಂಸ್ಥೆಯ ನುರಿತ ತಜ್ಞ ವೈದ್ಯರುಗಳು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿದರು.

medical-camp

ಶಿಬಿರದಲ್ಲಿ 1900 ಮಂದಿ ಆರೋಗ್ಯ ತಪಾಸಣೆಗೆ ಒಳಗಾದರು ಇದರಲ್ಲಿ ಸುಮಾರು 600ಮಂದಿಗೆ ಕಣಚೂರು ಸೇವಾ ಕಾರ್ಡ್ ವಿತರಿಸಿ ಮುಂದಿನ ಒಂದು ವರ್ಷದ ವರೆಗೆ ಸಂಸ್ಥೆಯ ಮಂಗಳೂರು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ತೀರ್ಮಾನ ಕೈಗೊಳ್ಳಲಾಯಿತು. ಶಿಬಿರದಲ್ಲಿ ಆರೋಗ್ಯ ತಪಾಸಣೆಗೆ ಒಳಗಾದವರಿಗೆ ಉಚಿತ ಔಷಧಿ ಮಾತ್ರೆಗಳನ್ನು ವಿತರಿಸಿಲಾಯಿತು. ಶಿಬಿರವನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಜಿ.ಸತ್ಯವತಿ ಉದ್ಘಾಟಿಸಿದರು.

ಕಣಚೂರು ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಕಣಚೂರು ಮೋಣು ಮಾತನಾಡಿ, ನ್ಮಮ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಯಾವುದೇ ಚಿಕಿತ್ಸೆ ನೀಡಿದರೂ ಉಚಿತ ಸೇವೆ ನೀಡಲಾಗುವುದು. ಗರ್ಬಿಣಿ ಸ್ತ್ರೀಯರಿಗೆ ಪ್ರಸೂತಿ ನಡೆದ ನಂತರ ಊಟ ಉಪಚಾರದೊಂದಿಗೆ ಮನೆಗೆ ಕಳುಹಿಸಲಗುವುದು. ಅದೇ ರೀತಿ ಜನನವಾದ ಮಗುವಿನ ಹೆಸರಿನಲ್ಲಿ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 1 ಸಾವಿರ ರೂ. ಠೇವಣಿ ನೀಡಲಾಗುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಡಾ.ಮೋಟಮ್ಮ ಮಾತನಾಡಿ, ಹಿರಿಯರ ಆದರ್ಶ ಗುಣಗಳನ್ನು ಪಾಲಿಸಿಕೊಂಡು ಮುಂದಿನ ಯುವ ಪೀಳಿಗೆಗೆ ದಾರೆ ಎಳೆಯುವ ನಿಟ್ಟಿನಲ್ಲಿ ಸಮಾಜ ಕಟ್ಟುವ ಕಾರ್ಯವನ್ನು ಮಾಡೋಣ. ಎಲ್ಲಾ ಸಾಮಝಿಕ ಕಾರ್ಯಗಳನ್ನು ಸರಕಾರವೇ ನರೆವೇರಿಸಲು ಸಾಧ್ಯವಿಲ್ಲ. ಧಾನಿಗಳು, ಧನಿಕರು ಮತ್ತು ಸಂಘ ಸಂಸ್ಥೆಗಳು ಸೇವೆಯಲ್ಲಿ ಮುನ್ನಡೆ ಬರಬೇಕೆಂದು ಹೇಳಿದರು.

ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ ತಮ್ಮ ತಂದೆ ಡಿ.ಎಸ್.ಕೃಷ್ಣಪ್ಪಗೌಡರು ಮಾಡಿರುವ ಸಮಾಜ ಸೇವೆ ಕಾರ್ಯಗಳನ್ನು ನೆನಪಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಡಿ.ಬಿ.ಸುಬ್ಬೇಗೌಡ ವಹಿಸಿದ್ದರು. ಶಾಸಕ ಬಿ.ಬಿ.ನಿಂಗಯ್ಯ ಮತ್ತು ಎಂಎಲ್‍ಸಿ ಎಂ.ಕೆ.ಪ್ರಾಣೇಶ್ ಮಾತನಾಡಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ಕುಮಾರ್, ಸದಸ್ಯ ರಂಜನ್ ಅಜೀತ್ ಕುಮಾರ್, ಪ.ಪಂ. ಅಧ್ಯಕ್ಷೆ ರಮಿಜಾಬಿ, ಉಪಾಧ್ಯಕ್ಷೆ ಪೂಣಿಮಾ ಮಲ್ಯ, ಡಾ.ರಘುರಾಮ್ ಅಡ್ಯಂತಾಯ, ಯು.ಆರ್.ಚಂದ್ರೇಗೌಡ, ಡಿ.ಕೆ.ಉದಯಶಂಕರ್, ಗೋಪಾಲಗೌಡ, ಬಿ.ಎಸ್.ಜಯರಾಂ ಗೌಡ, ಡಾ.ಸುಂದರೇಶ್, ಡಾ.ವಿರುಪಾಕ್ಷ ಮತ್ತಿತರರಿದ್ದರು.

By Suddi9

Leave a Reply

Your email address will not be published. Required fields are marked *