ಸುದ್ದಿ9 ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಶೇ 25% ನಿಯಿಂದ ಪ.ಜಾತಿ/ಪ.ಪಂಗಡದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ವಿತರಣೆ ಮಾಡಲಾಯಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಉಪಾಧ್ಯಕ್ಷ ಜೋನ್ಸನ್ ಜೆರೋಮ್ ಡಿಸೋಜ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಟಿ. ಹೆಚ್ ಮಯ್ಯದ್ದಿ, ಹೇಮಲತಾ, ಫಿಲೋಮಿನಾ ಸಿಕ್ವೇರಾ, ಆನಂದ ಗೌಡ, ಮಾಧವ, ಪಿ.ಡಿ.ಒ ಅರುಣ್ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
