24

ಅವನಿಗೆ ಕೊಟ್ಟಳು ಅವ ಮೆಚ್ಚಿದ ಹೃದಯ

ಕೊಟ್ಟವಳೆ ಅವನ ಹೃದಯ

ಗೊಂದಲ,ಪರದಾಟಗಳ ವಿದಾಯ

ಪ್ರೀತಿ ಪಾಠಗಳ ಉದಯ‌‌‌

ಜೀವನ ಆನಂದಮಯ

ತಪ್ಪಿತು ಅವರಿಬ್ಬರ ಲಯ

ಬೇಡವಾದ ಬೇಧ ಭಾವಗಳ ಸಂಶಯ

ದೂರವಾಗುತ್ತಿರುವ ಹೃದಯದ ಭಯ

ಕಳೆದು ಕೊಂಡಳು ಅವಳ ನಯ ವಿನಯ

ಒಂದು ದಿನ ಅವನ ಕಣ್ಣಿಗೂ ಕಾಣದೆ,

ಮಾತಿಗೂ ಬಾರದೆ ಅವಳೇ ಮಾಯಾ..!

ಕಿತ್ತೆಸೆದನು ಅವನು ಮೆಚ್ಚಿದ ಹೃದಯ

ಎಸೆದವನೆ ಅವಳ ಹೃದಯ

ಗೊಂದಲ ಪರದಾಟಗಳ ಉದಯ

ಪ್ರೀತಿ ಪಾಠಗಳ ವಿದಾಯ

ಜೀವನ ನರಕಮಯ

ತಪ್ಪಿತು ಅವನೊಬ್ಬನ ಲಯ

ಕುಡಿತ ಎಂಬ ದಷ್ಚಟದಿಂದ ಕಳೆದುಹೋಯಿತು ಅವನ ಪ್ರಾಯ

ಹತ್ತಿರವಾಗುತ್ತಿರುವ ಸಾವಿನ ಭಯ

ಕಳೆದುಕೊಂಡ ಹೃದಯದ ನೆನಪಿನ ಗಾಯ

ಒಂದು ದಿನ ಕಣ್ಣಿಗೂ ಕಾಣದೆ,

ಮಾತಿಗೂ ಬಾರದೆ ಅವನೇ ಮಾಯಾ..

                     -ಸಂದೀಪ್ ಆಚಾರ್ಯ (ಸುವರ್ಣನಾಡು)

1

By suddi9

Leave a Reply

Your email address will not be published. Required fields are marked *