ಮತ್ತೆ ಬಾ ಅಂಗಳಕ್ಕೆ..
ಕತ್ತಲ ಮುಸುಕಾಟಕ್ಕೆ
ಕಣ್ಣು ಕಟ್ಟಿ ಬಿಟ್ಟ ಆಟದಂತೆ
ನಾನಿರುವೆ ನಡುಬೀದಿಲಿ….
ನನಗೇನು ಗೊತ್ತು ಗೆಳೆಯ
ಕತ್ತಲಲ್ಲೂ ದಾರಿಯಿದೆಯೇ??
ಬಿಳಿಕಲ್ಲು ಚುಚ್ಚುತ್ತಿದೆ
ಕಾಲಿಗೇನೋ ಸಿಗುತ್ತಿದೆ
ಕರಿಬೆಕ್ಕು ಇರಬಹುದೇನೋ.
ಮತ್ತೆ ಬಾ ಅಂಗಳಕ್ಕೆ ಚಂದಿರ
ಮತ್ತೆ ಬಾ ನಂಬಿಕೆಯೆಂಬ ಬೆಳಕೊಂದಿಗೆ……
ಮಾಳ ಸುಜಿತ್ ಶೆಟ್ಟಿ (ಮನಸ್ಪತಿ)


