ಬಂಟ್ವಾಳ: ಜಾತಿ ಮತ ಬೇಧವಿಲ್ಲದ ಒಳ್ಳೆಯ ಮನಸ್ಸಿನಿಂದ ಉತ್ತಮ ಕಾರ್ಯದ ಮೂಲಕ ಶಾಂತಿ, ಸಮಾಧಾನ ತುಂಬಿದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಉತ್ಸವ, ಆಚರಣೆಗಳು ಸದೃಢ ರಾಷ್ಟ್ರ ನಿರ್ಮಾಣಕ್ಕೆ ನಾಂದಿಯಾಗಲಿ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕು ವಾಮದಪದವು ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ ವಾಮದಪದವು ಸ.ಪ.ಪೂ.ಕಾಲೇಜು ಸಭಾಂಗಣದಲ್ಲಿ ಜರಗಿದ 24ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಡಬಿದಿರೆ ಇನ್ನೋವೇಟಿವ್ ಲರ್ನಿಂಗ್ ಫೌಂಡೇಶನ್‍ನ ಚೇರ್‍ಮೇನ್ ಯುವರಾಜ ಜೈನ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ಭೂ.ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷ ಯತೀಶ್ ಎಂ.ಶೆಟ್ಟಿ, ಮೂಡಬಿದಿರೆ ತುಳು ಕೂಟ ಅಧ್ಯಕ್ಷ ಚಂದ್ರಹಾಸ ದೇವಾಡಿಗ, ಸಮಿತಿ ಗೌರವಾಧ್ಯಕ್ಷ ಅಮ್ಮು ರೈ ಹರ್ಕಾಡಿ, ಅಧ್ಯಕ್ಷ ಸಿ.ಅನಂತ ಪೈ , ಸಂಚಾಲಕ ಜಯಚಂದ್ರ ಬೊಳ್ಮಾರು, ಉಪಾಧ್ಯಕ್ಷ ವೆಂಕಪ್ಪ ಅಮೀನ್, ಪದಾಧಿಕಾರಿಗಳಾದ ಉದಯ ಕುಮಾರ್ ಶೆಟ್ಟಿ ಕುಂಡೋಳಿ, ವಸಂತ ಶೆಟ್ಟಿ ಗುತ್ತು, ಪ್ರೀತಂ ಸಪಲ್ಯ, ಹರೀಶ್ ಸಪಲ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2015-16ನೇ ಸಾಲಿನಲ್ಲಿ ಅತ್ಯಧಿಕ ಅಂಕ ಗಳಿಸಿದ ವಾಮದಪದವಿನ ಎಸ್ಸೆಸೆಲ್ಸಿ,ಪ.ಪೂ.,ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಮಿತಿ ಕಾರ್ಯದರ್ಶಿ ನವೀನ್‍ಚಂದ್ರ ಶೆಟ್ಟಿ ಅವರು ಸ್ವಾಗತಿಸಿದರು. ಪ್ರವೀಣ್ ಗಟ್ಟಿ ಅವರು ವಂದಿಸಿದರು. ಭರತ್ ಕುಮಾರ್ ಜೈನ್ ಅವರು ಕಾರ್ಯಕ್ರಮ ನಿರೂಪಿಸಿದರು.

