ಮೂಡುಬಿದಿರೆ: ಪುತ್ತಿಗೆ ಗ್ರಾಮದ ಹಂಡೇಲು ಎಂಬಲ್ಲಿನ ಗೋಡೌನ್ ಒಂದರಿಂದ 8 ಲಕ್ಷ ಮೌಲ್ಯದ ಕರಿಮೆಣಸನ್ನು ಕಳವು ಗೈಯಲಾಗದ್ದು, ಪ್ರಕರಣಕ್ಕೆ 7 ಮಂದಿ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮೂಡುಬಿದರೆ ಸಮೀಪದ ಹಂಡೇಲು ಶಾಲೆ ಬಳಿಯಿರುವ ಕೆ.ಎಂ.ಬಿ ಎಂಟರ್ಪ್ರೈಸಸ್ನ ಮುಖೇಶ್ ಕುಮಾರ್ ಪಾಟೀಲ್ ಎಂಬವರಿಗೆ ಸೇರಿದ ಗೋಡೌನ್ನಿಂದ 60 ಕೆ.ಜಿ ತೂಕವಿರುವ 21 ಕರಿಮೆಣಸು ಚೀಲಗಳನ್ನು ಕಳವುಗೈಯಲಾಗಿದೆ ಅದರ ಮೌಲ್ಯ 8 ಲಕ್ಷವೆಂದು ಅಂದಾಜಿಸಲಾಗಿದೆ.

crime (1)

crime (2)

ಮಂಗಳವಾರ ಮುಂಜಾನೆ ಗೋಡೌನ್ನ ಕಾಮರ್ಿಕರ ಬಂದು ನೋಡಿದಾಗ ಶಟರ್ನ ಬೀಗ ಮುರಿದಿದ್ದು, ಕರಿಮೆಣಸು ಕಳವು ಗೈದಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಡೌನ್ನಲ್ಲಿ ಕರಿಮೆಣಸು ಚೀಲಗಳನ್ನು ಹಿಂದೆ ಲೋಡ್ ಮಾಡುತ್ತಿದ್ದ ಕಲ್ಲಮುಂಡ್ಕೂರಿನ ಹರೀಶ್ ಬಗ್ಗೆ ವಾರೀಸುದಾರರು ಸಂಶಯ ವ್ಯಕ್ತಪಡಿಸಿದ್ದು, ಆತನನ್ನು ಪೊಲೀಸರು ವಿಚಾರ ನಡೆಸಿದಾಗ, ಇತರ 6 ಜನರೊಡನೆ ಕಳವು ಮಾಡಿದರೆಂದು ತಿಳಿದುಬಂದಿದೆ. ಕದ್ದ ಕರಿಮೆಣಸುಗಳನ್ನು ಪುರಸಭಾ ವ್ಯಾಪ್ತಿಯ ಹುಡ್ಕೋ ಕಾಲನಿ ಮನೆಯೊಂದರಲ್ಲಿ ಇರಿಸಿದ್ದು, ಮಂಗಳವಾರವೇ ಸ್ಕಾಪರ್ಿಯೋ ಗಾಡಿಯಲ್ಲಿ ಬೇರೆ ಕಡೆ ಸಾಗಿಸುವವರಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸರು ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಕರಿಮೆಣಸು ಚೀಲಗಳ ಜತೆಗೆ ಮೂಡುಬಿದಿರೆಯ ನವೀನ್, ಕಾಯರ್ಗುಂಡಿ ನಿವಾಸಿ ಸುಕೇಶ್ ಶೆಟ್ಟಿ, ನೆಲ್ಲಿಕಾರಿನ ಯೋಗಿರಾಜ್, ಪ್ರಶಾಂತ್, ಮಹೇಶ್ ಹಾಗೂ ಯೋಗೀಶ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

By suddi9

Leave a Reply

Your email address will not be published. Required fields are marked *