ಮೂಡುಬಿದಿರೆ:ಮನೆಗೆ ಟೈಲ್ಸ್ ಹಾಕುತ್ತೇನೆ, ಅಂಗಣಕ್ಕೆ ಇಂಟರ್ ಲಾಕ್ ಅಳವಡಿಸಿಕೊಡುತ್ತೇನೆ, ಸರ್ಪ ಸಂಸ್ಕಾರ ನಡೆಸಲಿದೆ ಹೀಗೆ ಒಂದೊಂದು ಮನೆಯಲ್ಲಿ ಒಂದೊಂದು ರೀತಿಯ ಸುಳ್ಳು ಹೇಳಿ ಜನರಿಂದ ಹಣ ಪೀಕಿಸುವ ವಂಚಕನೊಬ್ಬ ಮೂಡುಬಿದಿರೆ ಪರಿಸರದಲ್ಲಿ ಸುತ್ತಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದೆ.ಮಾಪರ್ಾಡಿಯ ಮನೆಯೊಂದಕ್ಕೆ ಬಂದು ಮನೆಯ ನೆಲಕ್ಕೆ ಟೈಲ್ಸ್ ಅಳವಡಿಸಿ ಕೊಡುತ್ತೇನೆ ಎಂದು ಅಲ್ಲಿದ್ದ ಮಹಿಳೆಯನ್ನು ನಂಬಿಸಿ ಒಂದು ಸಾವಿರ ರೂಪಾಯಿ ಪೀಕಿಸಿದ್ದಾನೆ. ಕೊಂಡಂಗಲ್ಲಿನ ಉದ್ಯಮಿಯೊಬ್ಬರ ಮನೆಗೆ ಬಂದು ಸರ್ಪ ಸಂಸ್ಕಾರಕ್ಕೆಂದು 500 ರೂಪಾಯಿ ಪಡಕೊಂಡರೆ ಹತ್ತಿರದ ಇನ್ನೊಂದು ಮನೆಗೆ ಹೋಗಿ ಮನೆ ರಿಪೇರಿಗೆ ಹಿಡಿದಿದ್ದೇನೆ ಸಹಾಯ ಮಾಡಿ ಎಂದು ನಂಬಿಸಿ 2500 ರೂಪಾಯಿ ನೆರವು ಪಡಕೊಂಡಿದ್ದಾನೆ. ಹೊಟೇಲ್ ಮೆನೇಜರ್ ಅವರ ಮಾಸ್ತಿಕಟ್ಟೆಯಲ್ಲಿರುವ ಮನೆಗೆ ಬಂದು ಒಳ್ಳೆಯ ಸಿಮೆಂಟ್ ಶೀಟ್ಗಳಿವೆ ಅರ್ಧ ರೇಟ್ ಕೊಟ್ಟರೆ ಸಾಕು ಎಂದು ನಂಬಿಸಿ ಮನೆಯವರಿಗೆ ಟೋಪಿ ಹಾಕುವ ಸಿದ್ಧತೆಯಲ್ಲಿದ್ದಾಗ ಸುದ್ದಿ ತಿಳಿದು ಹೊಟೇಲ್ ಮೆನೇಜರ್ ಮನೆಗೆ ಬಂದಾಗ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹೀಗೆ ಹೆಂಗಸರಿರುವ ಮನೆಗೆ ಬಂದು ಅವರನ್ನು ಬೇರೆ ಬೇರೆ ಹೆಸರಿನಲ್ಲಿ ವಂಚಿಸುತ್ತಿರುವ ಈ ಕಳ್ಳನ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿಬಂದಿದೆ. ತನ್ನನ್ನು ಕೋಟೆಬಾಗಿಲಿನ ಮಹೇಶ ಎಂದು ಪರಿಚಯಿಸಿಕೊಳ್ಳುವ ಈತ ಕಪ್ಪು ಮೈಬಣ್ಣ ಹೊಂದಿದ್ದಾನೆ. ಯುವಕನಂತೆ ಕಾಣುತ್ತಿದ್ದು ಸಾಮಾನ್ಯ ಎತ್ತರವಾಗಿದ್ದಾನೆ. ತುಳು ಚೆನ್ನಾಗಿ ಮಾತನಾಡುತ್ತಿರುವುದರಿಂದ ದೂರದ ವ್ಯಕ್ತ ಅಲ್ಲ ಎಂದು ಹೇಳಲಾಗುತ್ತಿದೆ. ಹಲವರಿಗೆ ವಂಚಿಸಿದರೂ ಯಾರೂ ಈತನನ್ನು ಹಿಡಿದು ಪೊಲೀಸರಿಗೊಪ್ಪಿಸುವ ಪ್ರಯತ್ನ ನಡೆಸಿಲ್ಲ.
