ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬಳಿ ಇರುವ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಪ್ರಯುಕ್ತ ಸ್ವಾಮಿ ವಿವೇಕ ಚೈತನ್ಯಾನಂದ ನವದುರ್ಗೆಯ ಅವತಾರವನ್ನು ಹೋಲುವಂತೆ ಪ್ರತಿದಿನ 9 ದಿನಗಳವರೆಗೆ ಹೆಣ್ಣು ಮಕ್ಕಳನ್ನು ಒಂದೊಂದು ದೇವಿ ಸ್ವರೂಪದಲ್ಲಿ ಕಾಣಿಸಿ, ಉಡುಗೆ ತೊಡುಗೆಗಳನ್ನು ತೊಡಿಸಿ ದೇವರ ಮಂಟಪದಲ್ಲಿ ಕುಳ್ಳಿರಿಸಿ ಪೂಜೆಯನ್ನು ಮಾಡಿ ಅವರಿಂದ ಆಶೀರ್ವಾದವನ್ನುಪಡೆಯುತ್ತಾರೆ.
ದೇವಿಗೆ ಕ್ರಮಾನುಸಾರವಾಗಿ ಪೂಜೆ, ಆರತಿಯನ್ನು ಮಾಡಿ, ನಂತರ ದೇವಿಯ ಬಾಯಿಗೆ ಪ್ರಸಾದವನ್ನು ಹಾಕಿ, ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಹಣ್ಣು ಹಂಪಲು ನೀಡುತ್ತಾರೆ.







