ಮುಂಬಯಿ: ಮಹಾನಗರ ಮುಂಬಯಿಯಿಂದ ಮೆಗ್ನಾ ಪಬ್ಲಿಷಿಂಗ್ ಸಂಸ್ಥೆಯಿಂದ ಪ್ರಕಾಶಿತ `ಸೊಸೈಟಿ ಐಕಾನ್’ ಗೌರವಕ್ಕೆ ತುಳು-ಕನ್ನಡಿಗ, ಭಂಡಾರಿ ಸಮಾಜದ ಧೀಮಂತ ನಾಯಕರಾಗಿ ಸಮಾಜವನ್ನು ಸರ್ವೋಭಿವೃದ್ಧಿಯ ಪಥದತ್ತ ಒಯ್ಯುತ್ತಾ ಅಖಂಡ ಸಮಾಜದ ಧೀಶಕ್ತಿಯಾಗಿ ಮುನ್ನಡೆಯುತ್ತಿರುವ ಕಡಂದಲೆ ಸುರೇಶ್ ಎಸ್.ಭಂಡಾರಿ ಪಾತ್ರರಾದರು.
ಇತ್ತೀಚೆಗೆ ನಗರದ ತಾಜ್ ತಾರಾ ಹೋಟೇಲ್ನಲ್ಲಿ ನೆರವೇರಿದ ಅದ್ದೂರಿ ಸಮಾರಂಭದಲ್ಲಿ ವಾರ್ಷಿಕ `ಸೊಸೈಟಿ ಐಕಾನ್ ಪುರಸ್ಕಾರ-2016’ನ್ನು ಬಾಲಿವುಡ್ ತಾರೆಯರಾದ ಮುಗ್ಧ ಗೋಡ್ಸೆ, ಗುಲ್ಶನ್ ಗ್ರೋವರ್, ಹರ್ಷ್ ಗೋಯೆಂಕಾ, ಅಶೋಕ್ ಧಮನ್ಕರ್ ಹಾಗೂ ನರಿ ಹಿರ ಕಡಂದಲೆ ಸುರೇಶ್ ಭಂಡಾರಿ ಅವರಿಗೆ ಪ್ರದಾನಿಸಿ ಅಭಿನಂದಿಸಿದರು.

ಸಮಾರಂಭದಲ್ಲಿ ಬಾಲಿವುಡ್ ರಂಗದ ರಾಕೇಶ್ ರೋಶನ್, ಆರ್.ಮಾಧವನ್, ನೂರಾರು ಗಣ್ಯರು ಸೇರಿದಂತೆ, ಶೋಭಾ ಸುರೇಶ್ ಭಂಡಾರಿ, ಅನಘ ಎಸ್.ಭಂಡಾರಿ, ಸೌರಭ್ ಎಸ್.ಭಂಡಾರಿ, ಅಂತರರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ ಡಾ| ಶಿವರಾಮ ಕೆ.ಭಂಡಾರಿ ಮತ್ತಿತರರು ಉಪಸ್ಥಿತರಿದ್ದು, ಸುರೇಶ್ ಭಂಡಾರಿ ಅವರಿಗೆ ಶುಭಾರೈಸಿದರು.

