ಫೋಂಡಾ (ಗೋವಾ): ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ. ‘ಹಿಂದೂ ಹಿತ ಕಿ ಬಾತ್ ಕರೆಗಾ, ವಹಿ ದೇಶ ಪೆ ರಾಜ್ ಕರೇಗಾ|’, ಈ ಘೋಷಣೆಯನ್ನು ಪ್ರತ್ಯಕ್ಷ ಸಾಕಾರಗೊಳಿಸಬೇಕು. ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಆರಂಭವಾಗಿದ್ದು ನ್ಯಾಯವಾದಿಗಳು ಅದಕ್ಕಾಗಿ ಸಂವಿಧಾನ ತಯಾರಿಸಲೂ ಆರಂಭಿಸಿದ್ದಾರೆ. ಇಂದು ಇಡೀ ಜಗತ್ತು ಜಿಹಾದಿ ಕ್ರೌರ್ಯವನ್ನು ಅನುಭವಿಸುತ್ತಿದೆ. ಆದುದರಿಂದ ಹಿಂದೂ ರಾಷ್ಟ್ರ ಆವಶ್ಯಕವಾಗಿದೆ, ಎಂದು ಅಯೋಧ್ಯಾದಲ್ಲಿ ರಾಮ ಮಂದಿರಕ್ಕಾಗಿ ನ್ಯಾಯಾಂಗ ಹೋರಾಟ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ. ಹರಿಶಂಕರ ಜೈನ್‌ರವರು ಪ್ರತಿಪಾದಿಸಿದರು. ಅವರು ತೃತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನದ ಮೂರನೇ ದಿನದ ಮೊದಲ ಸತ್ರದಲ್ಲಿ ಮಾತನಾಡುತ್ತಿದ್ದರು. ಈ ಅಧಿವೇಶನವು ಗೋವಾದ ರಾಮನಾಥಿಯಲ್ಲಿರುವ ಶ್ರೀ ರಾಮನಾಥ ದೇವಸ್ಥಾನದ ವಿದ್ಯಾಧಿರಾಜ ಸಭಾಗೃಹದಲ್ಲಿ ಜೂನ್ ೨೦ ರಿಂದ ಆರಂಭವಾಗಿದೆ. ರಾಮಮಂದಿರದ ಸ್ಥಾಪನೆಯ ಜೊತೆಗೆ ಇಸ್ಲಾಮಿ ಆಕ್ರಮಕಣಕಾರರು ಮಸೀದಿಗಳನ್ನಾಗಿಸಿದ ಕಾಶಿ – ಮಥುರಾದಲ್ಲಿನ ದೇವಸ್ಥಾನಗಳ ಮುಕ್ತಿ ಹಾಗೂ ಮಸೀದಿಗಳನ್ನಾಗಿಸಿದ ಇತರ ಮೂರು ಸಾವಿರದೇವಸ್ಥಾನಗಳನ್ನೂ ಮುಕ್ತಗೊಳಿಸುವುದು ಹಿಂದೂಗಳ ಮುಖ್ಯ ಧ್ಯೇಯವಾಗಿರುವುದು, ಎಂದೂ ಶ್ರೀ. ಹರಿಶಂಕರ ಜೈನ್‌ರವರು ಈ ಸಂದರ್ಭದಲ್ಲಿ ಹೇಳಿದರು.
ದೇಶದಲ್ಲಿ ಚತುರ್ಥ ಶ್ರೇಣಿಯ ಸಿಬ್ಬಂದಿಗಳನ್ನು ನೇಮಿಸುವ ಬಗ್ಗೆ ಕಾರ್ಯಪದ್ಧತಿ ಮತ್ತು ನಿಯಮವಿದೆ; ಆದರೆ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯ ಮುಂತಾದ ನ್ಯಾಯಾಲಯಗಳ ನ್ಯಾಯಾಧೀಶರನ್ನು ನೇಮಿಸುವ ನಿಯಮವಿಲ್ಲ. ಅವರನ್ನು ರಾಜಕಾರಣಿಗಳು ನೇಮಿಸುತ್ತಿದ್ದಾರೆ; ಆದುದರಿಂದ ಈ ನ್ಯಾಯಾಧೀಶರು ನೀಡಿದ ತೀರ್ಪು ಸಂಬಂಧಿತ ರಾಜಕಾರಣಿಗಳ ಪರವಾಗಿರುತ್ತದೆ, ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಇಂತಹ ನ್ಯಾಯಾಧೀಶರು ಹಿಂದೂವಿರೋಧಿ ತೀರ್ಪನ್ನೇ ಕೊಡುತ್ತಾರೆ, ಎಂಬುದೂ ಗಮನಕ್ಕೆ ಬಂದಿದೆ. ಇಂತಹ ನ್ಯಾಯಾಧೀಶರನ್ನು ನಿವೃತ್ತರಾದ ನಂತರ ರಾಜಕಾರಣಿಗಳು ಅವರನ್ನು ಯಾವುದಾದರೊಂದು ಸರಕಾರಿ ಮಂಡಳಿಗಳಲ್ಲಿ ನೇಮಿಸುತ್ತಾರೆ, ಎಂದು ಮುಂಬೈ ಉಚ್ಚ ನ್ಯಾಯಾಲಯದ ನ್ಯಾಯವಾದಿ ಸುಭಾಷ ಝಾರವರು ಹೇಳಿದರು. ಅಲ್ಲದೇ ಸಂಸತ್ತಿನಂತೆ ನ್ಯಾಯಾಲಯದ ಆಲಿಕೆಯನ್ನೂ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಬೇಕೆಂದು, ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ರಾಷ್ಟ್ರ ಮತ್ತು ಧರ್ಮ ಇವುಗಳ ಹಿತಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಹೇಗೆ ಕಾರ್ಯ ಮಾಡಬೇಕು, ಎಂಬುದರ ಬಗ್ಗೆ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೆಕರರು ಮಾರ್ಗದರ್ಶನ ಮಾಡಿದರು. ಅವರು ಮುಂಬೈಯ ಅಝಾದ ಮೈದಾನ ಗಲಭೆ, ಗೋವಾದ ಮೋತಿ ಬೆಟ್ಟದ ಮೇಲಿನ ಬಾಂಗ್ಲಾದೇಶಿ ನುಸುಳುಕೋರ ಮುಸಲ್ಮಾನರ ಅಕ್ರಮ ಗುಡಿಸಲುಗಳನ್ನು ತೆರವುಗೊಳಿಸುವುದು, ಪಂಡರಪುರದ ವಿಠ್ಠಲ ಮಂದಿರದ ಅವ್ಯವಹಾರ ಇತ್ಯಾದಿ ವಿಷಯಗಳ ಮೇಲೆ ಪರಿಷತ್ತು ದಾಖಲಿಸಿದ ರ್ಸಾಜನಿಕ ಹಿತಾಸಕ್ತಿ ಅರ್ಜಿ ಮತ್ತು ಅದಕ್ಕೆ ದೊರೆತ ಯಶಸ್ಸು ಇವುಗಳ ಮಾಹಿತಿ ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣುಶಂಕರ ಜೈನ್ ಇವರು ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮತ್ತು ಅದಕ್ಕೆ ದೊರೆತ ಯಶಸ್ಸಿನ ಮಾಹಿತಿ ನೀಡಿದರು ಹಾಗೂ ಹಿಂದುತ್ವವಾದಿ ನ್ಯಾಯವಾದಿಗಳು ‘ಭಗವಾ ಬಾರ್ ಅಸೋಸಿಯೇಶನ್’ ಸ್ಥಾಪಿಸಬೇಕು, ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯದ ಸೂಚನಾ ಅಧಿಕಾರ ಕಾರ್ಯಕರ್ತರಾದ ಶ್ರೀ. ಜಯಂತ ತಿನಯೀಕರ, ಕರ್ನಾಟಕದ ನ್ಯಾಯವಾದಿ ಸಂಘಟನೆಯ ಉಪಾಧ್ಯಕ್ಷ ನ್ಯಾಯವಾದಿ ಅಮೃತೇಶ ಎನ್. ಪಿ. ಮತ್ತು ಮಧ್ಯಪ್ರದೇಶದ ಹಿಂದೂ ಸೇವಾ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ಮನೋಜ ತಿವಾರಿಯವರು ಮಾರ್ಗದರ್ಶನ ಮಾಡಿದರು.




