Ravindra_ghosh_C
ತೃತೀಯ ಅಖಿಲ ಭಾರತೀಯ ಹಿಂದೂ ಅಧಿವವೇಶನ;
ವಿದ್ಯಾಧಿರಾಜ ಸಭಾಗೃಹ, ರಾಮನಾಥಿ (ಗೋವಾ) : ಮತಾಂಧರು ಕಳೆದ ೬ ತಿಂಗಳಿನಲ್ಲಿ ೨೯೦೦ ಹಿಂದೂ ಕುಟುಂಬಗಳ ಮೇಲೆ ದೌರ್ಜನ್ಯವೆಸಗಿದ್ದಾರೆ. ದೇವತೆಗಳ ೧೬೯೦ ಮೂರ್ತಿಗಳನ್ನು ಭಗ್ನಗೊಳಿಸಲಾಗಿದೆ ಮತ್ತು ೩೧೦೦ ದೇವಸ್ಥಾನಗಳನ್ನು ಕೆಡವಲಾಗಿದೆ. ೧೯೪೭ರಲ್ಲಿ ಶೇ.೩೯ ರಷ್ಟು ಹಿಂದೂಗಳಿದ್ದರು. ಈಗ ಆ ಸಂಖ್ಯೆಯು ಶೇ. ೯.೪೬ ರಷ್ಟಾಗಿದೆ. ಇಷ್ಟೆಲ್ಲ ದೌರ್ಜನ್ಯಗಳಾದರೂ ಹಿಂದೂಗಳು ಬಾಂಗ್ಲಾದೇಶವನ್ನು ತ್ಯಜಿಸಲು ಇಷ್ಟಪಡುತ್ತಿಲ್ಲ. ಏಕೆಂದರೆ ಅವರಿಗೆ ಅಖಂಡ ಹಿಂದೂ ರಾಷ್ಟ್ರ ಬೇಕಾಗಿದೆ, ಎಂದು ಬಾಂಗ್ಲಾದೇಶದ ‘ಬಾಂಗ್ಲಾದೇಶಿ ಮೈನಾರಿಟಿ ವಾಚ್’ ಅಧ್ಯಕ್ಷ ನ್ಯಾಯವಾದಿ ಶ್ರೀ.ರವೀಂದ್ರ ಘೋಷ ಇವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯಗಳ ಮಾಹಿತಿಯನ್ನು ನೀಡುವಾಗ ಪ್ರತಿಪಾದಿಸಿದರು. ಅವರು ತೃತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನದ ಮೂರನೇ ದಿನದ (೨೨ ಜೂನ್) ಸಾಯಂಕಾಲ ನಡೆದ ಸತ್ರದಲ್ಲಿ ಮಾತನಾಡುತ್ತಿದ್ದರು. ಈ ಅಧಿವೇಶನವು ೨೦ ಜೂನ್‌ನಿಂದ ಗೋವಾದ ರಾಮನಾಥಿಯಲ್ಲಿರುವ ಶ್ರೀ ರಾಮನಾಥ ದೇವಸ್ಥಾನದ ವಿದ್ಯಾಧಿರಾಜ ಸಭಾಗೃಹದಲ್ಲಿ ನಡೆಯುತ್ತಿದೆ.

ನಾಲ್ಕನೆಯ ದಿನದ (೨೩ ಜೂನ್‌ನ) ಬೆಳಗ್ಗಿನ ಸತ್ರದಲ್ಲಿ ‘ಗಲಭೆಗಳಲ್ಲಿ ಹಿಂದೂಗಳ ರಕ್ಷಣೆ’ ಎಂಬ ವಿಷಯದಲ್ಲಿ ಕೆಳಗಿನ ವಕ್ತಾರರು ಮಾರ್ಗದರ್ಶನ ಮಾಡಿದರು

hindu adhiveshan
hindu adhiveshan

 

 

Ravindra_ghosh_C
Ravindra_ghosh_C

 

arvind_pansare_C
arvind_pansare_C

ಉಗ್ರರೊಂದಿಗೆ ಹೋರಾಡಲು ಭಾರತೀಯರು ಸಿದ್ಧರಾಗಬೇಕು! – ಶ್ರೀ.ಪಾರಸ ರಾಜಪೂತ, ‘ಹಿಂದೂ ಹೆಲ್ಪಲೈನ್’

ಭಾರತವು ಇರಾನ್, ಇರಾಕ್, ಅಫ್ಘಾನಿಸ್ತಾನ, ಪಾಕಿಸ್ತಾನ ಮುಂತಾದ ದೇಶಗಳಲ್ಲಿನ ಜಿಹಾದಿ ಉಗ್ರ ಮುಂದಿನ ಗುರಿಯಾಗಿರುವುದರಿಂದ ಅವರೊಂದಿಗೆ ಹೋರಾಡಲು ಭಾರತೀಯರು ಈಗ ಸಿದ್ಧರಾಗಬೇಕು, ಎಂದು ಮುಂಬೈಯಲ್ಲಿನ ಹಿಂದೂ ಹೆಲ್ಪ್‌ಲೈನ್‌ನ ಶ್ರೀ.ಪಾರಸ ರಾಜಪೂತರು ಆಗ್ರಹಿಸಿದರು. ಸರಕಾರವು ಹಿಂದೂಗಳನ್ನು ರಕ್ಷಿಸುವ ಸಾಧ್ಯತೆಯಿಲ್ಲದ ಕಾರಣ ಹಿಂದುತ್ವವಾದಿ ಸಂಘಟನೆಗಳು ಅದಕ್ಕಾಗಿ ಸಿದ್ಥತೆಯನ್ನು ಮಾಡಬೇಕಾಗುವುದು ಎಂದು ಅವರು ಕರೆ ನೀಡಿದರು.

ಧರ್ಮಸಂಸ್ಥಾಪನೆಯ ಕಾರ್ಯ ಮಾಡಲು ಹಿಂದೂಗಳು ಸಾಧನೆಯನ್ನು ಮಾಡಿ ಶಕ್ತಿಯನ್ನು
ಹೆಚ್ಚಿಸಿಕೊಳ್ಳಬೇಕು!
 – ಶ್ರೀ.ರಮೇಶ ಶಿಂದೆ, ಹಿಂದೂ ಜನಜಾಗೃತಿ ಸಮಿತಿ

ಧರ್ಮಸಂಸ್ಥಾಪನೆಗಾಗಿ ಭಗವಾನ ಶ್ರೀಕೃಷ್ಣನು ಅವತರಿಸಲು ಸಿದ್ಧನಿರುವಾಗ ಹಿಂದೂಗಳು ಅದರಲ್ಲಿ ಪಾಲ್ಗೊಳ್ಳುವುದು ಅವರ ಕರ್ತವ್ಯವೇ ಆಗಿದೆ. ಈ ಕಾರ್ಯವನ್ನು ಭಾವನೆಯ ಸ್ತರದಲ್ಲಿ ಮಾಡಿದರೆ ಏನೂ ಯಶಸ್ಸು ಸಿಗಲಾರದು. ಹಾಗಾಗಿ ಅದನ್ನು ಕಾಲಾನುಸಾರ ಮಾಡಬೇಕು, ಹಾಗೆಯೇ ಕಾರ್ಯಕ್ಕಾಗಿ ಹಿಂದೂಗಳು ಈಶ್ವರೀ ಸಾಧನೆಯನ್ನು ಮಾಡಿ ತಮ್ಮಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ನಿರ್ಮಿಸಿಕೊಳ್ಳಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ.ರಮೇಶ ಶಿಂದೆಯವರು ಕರೆ ನೀಡಿದರು.

ದೇಶದಲ್ಲಾಗುವ ಗಲಭೆಗಳನ್ನು ತಡೆಗಟ್ಟಲು ಸ್ವರಕ್ಷಣಾ ತರಬೇತಿ ಪಡೆದು ಪ್ರತ್ಯುತ್ತರ ನೀಡಿರಿ! – ನ್ಯಾಯವಾದಿ ಶ್ರೀ.ಸಂಜೀವ ಪುನಾಳೆಕರ
ಹಿಂದೂಗಳ ಶ್ರದ್ಧಾಸ್ಥಾನಗಳ ಮೇಲೆ ಆಘಾತವಾದ ನಂತರ ಬೇರೆಲ್ಲಿಯೂ ಅದಕ್ಕೆ ಪ್ರತಿಕ್ರಿಯೆಯು ಉದ್ಭವಿಸುವುದಿಲ್ಲ. ಆದರೆ ಮ್ಯಾನ್ಮಾರ್‌ನ ಮುಸಲ್ಮಾನ ಸಮುದಾಯದ ಮೇಲೆ ದಾಳಿಯಾದಾಗ ಮುಂಬೈಯಲ್ಲಿ ಅದರ ಪ್ರತಿಕ್ರಿಯೆ ಉದ್ಭವಿಸುತ್ತದೆ ಮತ್ತು ಹಿಂದೂಗಳಿಗೆ ಥಳಿಸಲಾಗುತ್ತದೆ. ಅದಕ್ಕಾಗಿ ಗಲಭೆಗಳನ್ನು ತಡೆಗಟ್ಟಲು ಹಿಂದೂಗಳು ಸ್ವಸಂರಕ್ಷಣಾ ತರಬೇತಿ ಪಡೆಯಬೇಕು. ಗಲಭೆಕೋರರಿಗೆ ಪ್ರತ್ಯುತ್ತರ ನೀಡಿದರೆ ಮಾತ್ರ ಅವರನ್ನು ನಿಯಂತ್ರಿಸಬಹುದು ಎಂಬುದು ಇತಿಹಾಸವಾಗಿದೆ, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಅಡ್. ಸಂಜೀವ ಪುನಾಳೆಕರ ಇವರು ಪ್ರತಿಪಾದಿಸಿದರು.

ದುರ್ಜನರು ಸಂಘಟಿತರಾಗಬಲ್ಲರು, ಹೀಗಿರುವಾಗ ಸಜ್ಜನರೇಕೆ ಸಂಘಟಿತರಾಗಲಾರರು ಎಂದು ಉತ್ತರ ಪ್ರದೇಶದ ಉದ್ಯಮಿ ಶ್ರೀ.ವಿನೋದ ಕುಮಾರ ಸರ್ವೋದಯರು ಪ್ರಶ್ನಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ರಾಜ್ಯ ವಕ್ತಾರ ಶ್ರೀ.ಅರವಿಂದ ಪಾನಸರೆ ಇವರು ಸಮಿತಿಯು ಆಝಾದ್ ಮೈದಾನದಲ್ಲಾದ ದಂಗೆಯ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಯಾಚಿಕೆಗೆ ಇಂದಿನ ತನಕ ದೊರಕಿದ ಯಶಸ್ಸಿನ ಮಾಹಿತಿಯನ್ನು ನೀಡಿದರು ಹಾಗೆಯೇ ಮೀರಜನ ಶಿವಸೇನೆಯ ಶ್ರೀ.ಆನಂದ ರಾಜಪೂತರ ಮತ್ತು ಹಿಂದೂ ಮಹಾಸಭೆಯ ಮಹಾರಾಷ್ಟ್ರ ಪ್ರದೇಶ ಸಂಘಟಕ ನ್ಯಾಯವಾದಿ ಗೋವಿಂದ ತಿವಾರಿಯವರೂ ಮಾರ್ಗದರ್ಶನ ಮಾಡಿದರು.

By suddi9

Leave a Reply

Your email address will not be published. Required fields are marked *