ಉಲ್ಲಾಳ: ಎರಡು ಲಾರಿಗಳಲ್ಲಿ ಪರವಾನಿಗೆ ಪಡೆದು ಸಾಗಾಟ ಮಾಡುತ್ತಿದ್ದ ಜಾನುವಾರು ಗಳನ್ನು ತೊಕ್ಕೋಟ್ಟು ಮೇಲ್ಸೇತುವೆಯ ಬಳಿ ಸಾರ್ವಜನಿಕರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮಹಾರಾಷ್ಟ್ರದಿಂದ ಸುಕ್ಕ ಸಿಂಗ್ ಮತ್ತು ಕೇಬಲ್ ಸಿಂಗ್ ಸೇರಿದಂತೆ ಇತರ ಎಳೆಂಟು ಜನರು ಜಾನುವಾರುಗಳನ್ನುಕೇರಳದ ಕೊಟ್ಟಾಯಂನಆಶ್ರಮವೊಂದಕ್ಕೆ ಸಾಗಿಸುತ್ತಿದ್ದರು.
ಪಂಜಾಬ್ ನೊಂದಣಿ ಹೊಂದಿದ್ದ ಲಾರಿಗಳಲ್ಲಿ ದೇಶದ ಅಪರೂಪದ ತಳಿಯ ದನಗಳಾದ ಗಿರ್ ಹಾಗೂ ಸಾಹಿವಾಲ್ ತಳಿಯ ನಾಲ್ಕು ದನಗಳು ,ಮೂರು ಕರುಗಳು ಉತ್ತಮ ತಳಿಯ 7 ಕೋಣಗಳನ್ನು ದಾಖಲೆ ಸಹಿತ ಸಗಾಣಿಕೆ ಮಾಡಲಾಗುತ್ತಿತ್ತು.
ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ತಡೆದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು ಸಿಂಗ್ ಅವರನ್ನು ವಿಚಾರಿಸಿದಾಗ ಜಾನುವಾರು ಸಾಗಾಣಿಕೆಯ ಮೂಲ ದಾಖಲೆಗಳನ್ನು ನೀಡಿದ್ದಾರೆ.
ದಾಖಲೆಗಳೆಲ್ಲವು ಸರಿಯಾಗಿದ್ದುದರಿಂದ ಹಾಗೂ ಜಾನುವಾರುಗಳನ್ನು ಆಶ್ರಮಕ್ಕೆ ಸಾಗಿಸುತ್ತಿರುವುದು ಧೃಡಪಟ್ಟಿದ್ದರಿಂದ ಯಾವುದೇ ಪ್ರಕರಣ ದಾಖಲಿಸಿದ ಪೊಲೀಸರು ಜಾನುವಾರುಗಳ ಸಾಗಾಟಕ್ಕೆ ಆನುಮತಿ ನೀಡಿದರು.
ಮಂಗಳೂರು ಸುತ್ತಮುತ್ತ ಪದೆ ಪದೆ ಜಾನುವಾರು ಕಳವು ಹೆಚ್ಚಿರುವುದು, ಅಕ್ರಮ ಜಾನುವಾರು ಸಾಗಾಟ ವ್ಯಾಪಕವಾಗಿರುವುದೇ ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
