ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ವ್ಯಾಪ್ತಿಯ ಕರಿಮಲೆ-ಅನ್ನಳಿಕೆ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಿಆರ್ಎಫ್ಗೆ ಮೂರೂವರೆ ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮಂಜೂರಾತಿಗೊಂಡಿದೆ. ಜೊತೆಗೆ ಒಂದು ಬಾರಿ ಅಭಿವೃದ್ಧಿ ಯೋಜನೆಯಲ್ಲೂ ಅನುದಾನ ದೊರಕಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಮಂಗಳವಾರ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚೆನ್ನೈತ್ತೋಡಿ,ಇರ್ವತ್ತೂರು, ಸಂಗಬೆಟ್ಟು ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಸುಮಾರು 1.71 ಕೋ.ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸಿವಂತೆ ಅಪೆಂಡಿಕ್ಸ್ ಇ ಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರ ಮಂಜೂರಾತಿ ದೊರಕಲಿದೆ.ವಗ್ಗ-ಅಲ್ಲಿಪಾದೆ ರಸ್ತೆ,ಮೂರ್ಜೆ-ನೇರಳಕಟ್ಟೆ ರಸ್ತೆಗಳನ್ನು ಶೀಘ್ರ ಅಭಿವೃದ್ಧಿ ಪಡಿಸಲಾಗುವುದು ಎಂದ ಅವರು ರಾಜ್ಯದಲ್ಲಿ ಪ್ರಥಮ ಬಾರಿಗೆ ವಾಮದಪದವು ಮತ್ತು ಉಳಿ ಗ್ರಾ.ಪಂ.ಗಳಿಗೆ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ತಲಾ 50 ಲ.ರೂ.ಅನುದಾನ ದೊರಕಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.
ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 10 ಲ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಮುರದಮೇಲು -ಗೋಂಜ ಕಾಂಕ್ರೀಟ್ ರಸ್ತೆ ಉದ್ಘಾಟನೆ ಹಾಗೂ ಮುಂದುವರಿಕೆ ರಸ್ತೆಗೆ ಶಿಲಾನ್ಯಾಸವನ್ನು ಸಚಿವರು ನೆರವೇರಿಸಿದರು.20 ಲ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಂಗಡಿ ಪಲ್ಕೆ ರಸ್ತೆಯ ಉದ್ಘಾಟನೆ,20ಲ.ರೂ.ವೆಚ್ಚದ ಜತ್ತನಕೆರೆ ರಸ್ತೆ ,10ಲ.ರೂ ವೆಚ್ಚದ ಬಜೆ ರಸ್ತೆ, 10ಲ.ರೂ.ವೆಚ್ಚದ ಇರ್ವತ್ತೂರು-ಕಲ್ಲಡ್ಕ ರಸ್ತೆ, 10ಲ.ರೂ ವೆಚ್ಚದ ಪಚ್ಚೇರು ಪಲ್ಕೆ ರಸ್ತೆ,15 ಲ.ರೂ. ವೆಚ್ಚದ ಎರ್ಮೆನಾಡು ರಸ್ತೆ, 11 ಲ.ರೂ. ವೆಚ್ಚದ ಬಸ್ತಿಕೋಡಿ ಎರಡನೇ ಕಾಲೊನಿ ರಸ್ತೆ,10 ಲ.ರೂ. ವೆಚ್ಚದ ಬಿ.ಎಸ್ ನಗರ ಇರ್ವತ್ತೂರು ರಸ್ತೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.ಮತ್ತು ಫರಾರಿ ಮಸೀದಿ ಬಳಿಯ ವಿದ್ಯುತ್ ಪರಿವರ್ತಕವನ್ನು ಉದ್ಘಾಟಿಸಿದರು.
ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷ ಯತೀಶ್ ಶೆಟ್ಟಿ,ಸರಪಾಡಿ ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಕೆ.ಮಾಯಿಲಪ್ಪ ಸಾಲ್ಯಾನ್, ತಾ.ಪಂ.ಸದಸ್ಯೆ ರತ್ನಾವತಿ ಜೆ.ಶೆಟ್ಟಿ, ಪಂ.ಅ.ಅ„ಕಾರಿ ಧರ್ಮರಾಜ್,ರಾಜ್ಯ ಗೇರು ಅಭಿವೃದ್ಧಿ ನಿಗಮ ನಿರ್ದೇಶಕ ಜಗದೀಶ ಕೊಯಿಲ,ಗ್ರಾ.ಪಂ.ಉಪಾಧ್ಯಕ್ಷೆ ವಿಶಾಲಾಕ್ಷಿ ,ವಾಮದಪದವು ವಲಯ ಕಾಂಗ್ರೆಸ್ ಅಧ್ಯಕ್ಷ ಅಮ್ಮು ರೈ ಹರ್ಕಾಡಿ ಅವರು ವೇದಿಕೆಯಲ್ಲಿದ್ದರು.
ಗ್ರಾ.ಪಂ.ಸದಸ್ಯರಾದ ಅನಂತ್ ಪೈ,ಉದಯ ಕುಮಾರ್ ಶೆಟ್ಟಿ, ಆನಂದ ಪೂಜಾರಿ, ಪ್ರೇಮಾ, ಶಾರದಾ, ಕುಶಲ, ಡೀಕಯ್ಯ, ಮೋಹಿನಿ ಹರೀಶ್, ಪ್ರಮುಖರಾದ ಯುವರಾಜ ಆಳ್ವ,ಶ್ರೀಧರ ಪೈ, ರಮಾನಾಂದ ಬೆದ್ರಕಾಡು, ಬಾಬು ರಾಜೇಂದ್ರ ಶೆಟ್ಟಿ, ಮೋಹನ ರೈ, ವೀರಪ್ಪ ಶೆಟ್ಟಿ, ನಾಭಿರಾಜ ಕೆಲ್ಲ, ಶಿವರಾಮ ಪೂಜಾರಿ, ಪ್ರವೀಣ್ ಗಟ್ಟಿ, ಅಶ್ರಫ್ ಅರಳ, ವಿಶ್ವನಾಥ ಶೆಟ್ಟಿ ಗಂಟಾರ ಬೆಟ್ಟು, ಪ್ರಶಾಂತ್ ಕೋಟ್ಯಾನ್, ಎಂ.ರಾಜೀವ ಶೆಟ್ಟಿ, ಶೇಖ್ ರಹಮತ್ತುಲ್ಲ, ಮಹಾಲಿಂಗ ಶರ್ಮ, ಕಿಶೋರ್ ಕುಮಾರ್, ಲೋಕೋಪಯೋಗಿ ಇಲಾಖೆಯ ಅಭಿಯಂತರ ಉಮೇಶ್ ಭಟ್ ಮತ್ತು ಅರುಣ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ನವೀನ ಚಂದ್ರ ಶೆಟ್ಟಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


