ಬಂಟ್ವಾಳ:ನಿವೃತ್ತ ಮುಖ್ಯ ಶಿಕ್ಷಕ,ಮೂಡುಪಡುಕೋಡಿ ಗ್ರಾಮದ ಸಣಂಗುಳಿ ನಿವಾಸಿ ಅನಂತಕೃಷ್ಣ ಎಸ್.ಕೋರ್ನಾಯ(75) ಅವರು ಅಸೌಖ್ಯದಿಂದ ಅ.4ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಇರ್ವತ್ತೂರುಪದವುನ ವೈದ್ಯ ಡಾ.ರಾಮಕೃಷ್ಣ ಎಸ್.ಅವರ ಸಹಿತ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

0410pkt2ananthakrishna-s-kornaya

ಅವರು ಸುಮಾರು 30 ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು ಮುಖ್ಯ ಶಿಕ್ಷಕರಾಗಿ ಸ್ವಯಂನಿವೃತ್ತಿ ಹೊಂದಿದ್ದರು. ಬಳಿಕ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸಿದ್ಧಕಟ್ಟೆ, ವೇಣೂರು, ಪುಂಜಾಲಕಟ್ಟೆ, ಕಲ್ಲಡ್ಕಗಳಲ್ಲಿ ಶಿಕ್ಷಕರಾಗಿದ್ದ ಅವರು ಅಳದಂಗಡಿ, ಪಡಂಗಡಿ, ವಾಮದಪದವು ಮತ್ತು ನೋಣಲ್‍ಪದವುಗಳಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಸ್ಥಳೀಯ ಪಾಂಗಲ್ಪಾಡಿ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜಾ ಸಮಿತಿಯ ಸ್ಥಾಪಕ ಸದಸ್ಯರಾಗಿದ್ದರು.

By suddi9

Leave a Reply

Your email address will not be published. Required fields are marked *