ಬಂಟ್ವಾಳ: ಮಲೆಕುಡಿಯ ಸಂಘ ದಕ್ಷಿಣ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಲೆಕುಡಿಯ ಸಂಘ ಸಮಿತಿ ರಚಿಸುವ ಸಲುವಾಗಿ ಸಮಾಲೋಚನಾ ಸಭೆ ಅ.23 ರವಿವಾರ 10 ಗಂಟೆಗೆ ಅರಳ ಗ್ರಾಮದ ರಘು ಎರ್ಮಳ ಎಂಬವರ ಮನೆಯ ವಠಾರದಲ್ಲಿ ನಡೆಯಲಿದೆ.
ಈ ಸಮಾಲೋಚನ ಸಭೆಯಲ್ಲಿ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಅಣ್ಣಪ್ಪ ಎನ್., ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು, ದ.ಕ ಜಿಲ್ಲಾಮಲೆಕುಡಿಯ ಸಂಘದ ಅಧ್ಯಕ್ಷ ಸಂಜೀವ ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
