ಬಂಟ್ವಾಳ: ಅಮರಜ್ಯೋತಿ ಫ್ರೆಂಡ್ಸ್ ಸರ್ಕಲ್(ರಿ),ಮುತ್ತೂರು ಇದರ ಆಶ್ರಯದಲ್ಲಿ ತೃತೀಯ ವರ್ಷದ ಅಮರಜ್ಯೋತಿ ಕ್ರೀಡಾ ಕೂಟ 2016 ಇದರ ಪ್ರಯುಕ್ತ ಕೆಸರ್‍ಡೊಂಜಿ ದಿನ ಕೆಸರುಗದ್ದೆಯಲ್ಲಿ ಆಟೋಟ ಸ್ಪರ್ಧೆಗಳು ಅ. 9 ರಂದು ಫಲ್ಗುಣಿ ನದಿ ತೀರದಲ್ಲಿರುವ ಮುತ್ತೂರು ದೋಣಿಕರಿಯದ ಬಾಕಿಮಾರು ಗದ್ದೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕುಪ್ಪೆಪದವು ಕೃಷ್ಣ ಅಸ್ರಣ್ಣ ಉದ್ಗಾಟಿಸಲಿದ್ದಾರೆ.

ಕೃಷ್ಣರಾಜ ಮಾರ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಜೊತೆಗೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಳಿಪ್ಪಾಡಿ ಗುತ್ತು ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರರ ಗಣ್ಯರು ಭಾಗವಹಿಸುತ್ತಾರೆ ಮತ್ತು ತುಳುನಾಡಿನ ಸಾಂಪ್ರದಾಯಿಕ ಕೃಷಿಕರನ್ನು ಗುರುತಿಸುವ ಮತ್ತು ದಿ| ವಸಂತ ಶೆಟ್ಟಿ ಮಿತ್ತೊಟ್ಟು ಇವರ ಸ್ಮರಣಾರ್ಥವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮ್ತತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವರನ್ನು ಪುರಸ್ಕರಿಸಲಾಗುವುದು ಎಂದು ಸಂಚಾಲಕ ಪವನ್ ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *