ಬಂಟ್ವಾಳ: ವ್ಯಕ್ತಿಯ ವ್ಯಕ್ತಿತ್ವ , ಮಾನಸಿಕ, ಬೌದ್ದಿಕ, ಸಾಹಿತ್ಯ, ಸಂಸ್ಕೃತಿ ವಿಕಸನಗೊಳ್ಳಲು ಯಕ್ಷಗಾನ ಕಲೆ ಅತ್ಯಂತ ಪ್ರಾಮುಖ್ಯ ಎಂದು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ರ್ಖತ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಹೇಳಿದರು. ಅವರು ಬಿಸಿರೋಡ್ ಅಜ್ಜಿಬೆಟ್ಟು ಶಾಲಾ ಬಳಿ ಬಸವ ಮಂಟಪದಲ್ಲಿ ಅ.2ರಂದು ಯಕ್ಷಗಾನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅರೋಗ್ಯದ ದೃಷ್ಟಿಯಿಂದ ಉತ್ತಮವಾದ ವ್ಯಾಯಮ ಕೂಡಾ ಯಕ್ಷಗಾನದಿಂದ ಸಿಗುತ್ತದೆ. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ನಮ್ಮ ಅರಾಧ್ಯ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಬೇಕಾದ ಜವಬ್ದಾರಿ ಪ್ರತಿಯೋಬ್ಬ ಕಲಾರಾಧಕನಲ್ಲಿರಬೇಕು ಎಂದರು. ಎಲ್ಲವನ್ನು ಕಲಿತಿದ್ದೇನೆ ಎನ್ನುವ ಜಂಭ ಬೇಡ, ನಿರಂತರವಾಗಿ ಕಲಿಯುವ , ನಿರಂತರ ಹೊಸತನದ ಹುಡುಕಾಟವಿರಬೇಕು, ಅಂತಹ ವ್ಯಕ್ತಿಗಳು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿ ಸಂಕಪ್ಪ ಶೆಟ್ಟಿ ಮಾತನಾಡಿ ಬಾಷೆ, ಸಂಸ್ಕೃತಿಯ ವಿಶಿಷ್ಟವಾದ ಕಲೆಯನ್ನು ಯಕ್ಷಗಾನ ಹೊಂದಿದೆ, ಶುದ್ದ ಕನ್ನಡ ಬಾಷೆಯ ಅಳವಡಿಕೆ ಯಕ್ಷಗಾನದಲ್ಲಿ ಮಾತ್ರ ಅಳವಡಿಕೆ, ಅಂತಹ ವಿಶಿಷ್ಟ ಕಲೆ ಅವನತಿಯತ್ತ ಸಾಗುತ್ತಿದೆ ಎನ್ನುವುದು ವಿಷಾದವನ್ನುಂಟು ಮಾಡುತ್ತದೆ. ಯಕ್ಷಗಾದ ಮಹತ್ವ ಮತ್ತು ಅಗತ್ಯವನ್ನು ತಿಳಿದುಕೊಂಡು ಕಲೆಯನ್ನು ಬೆಳೆಸುವ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ವಕೀಲ ಪ್ರಸಾದ್ ಕುಮಾರ್, ಬೇಬಿ ಕುಂದರ್, ಎ ಮೋಹನ್ ಪೂಜಾರಿ ಅಗ್ರಬೈಲು, ನಾಗೇಶ್ ಮತ್ತು ಆನಂದ ಉಪಸ್ಥಿತರಿದ್ದರು. ದಯಾನಂದ ಪಿಲಿಕೂರು ಶಿಬಿರದ ತರಬೇತಿಯನ್ನು ನೀಡಿದರು. ಯಕ್ಷಗಾನದ ವಿವಿಧ ಪ್ರಕಾರಗಳಾದ ನಾಟ್ಯ,ಕುಣಿತ, . ಹಾಡುಗಾರಿಕೆ, ಹಿಮ್ಮೇಳ,ಮುಮ್ಮೇಳಗಳ ವಿವಿಧ ವಿಚಾರಗಳ ಬಗ್ಗೆ ಹಂತಹಂತವಾಗಿ ತರಬೇತಿ ನೀಡಲಾಗುವುದು ಎಂದು ಇದೇ ಸಂದರ್ಭ ತಿಳಿಸಿದ್ದಾರೆ. ಶ್ರೀದರ್ ಅಮೀನ್ ಸ್ವಾಗತಿಸಿ, ಆಶಾ ಮಣಿ ವಂದಿಸಿದರು

