ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ವಾರ್ಡಿನ ಸುಮಾರು 25 ವರ್ಷಗಳ ಬೇಡಿಕೆಯಾಗಿರುವ ಆಲಡ್ಕದಿಂದ ಉಪ್ಪುಗುಡ್ಡೆ ಸಂರ್ಪಕಿಸುವ ಕಾಲುದಾರಿಗೆ ಸುಮಾರು 3.30 ಲಕ್ಷ ವೆಚ್ಚದಲ್ಲಿ ಮೆಟ್ಟಿಲುಗಳನ್ನು ರಚಿಸಲು ಸಹಕರಿಸಿದ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರನ್ನು ಅಭಿನಂದಿಸಲಾಯಿತು.ಈ ಸಂದರ್ಭ ಪುರಸಭಾ ಸದಸ್ಯೆ ಚಂಚಲಾಕ್ಷಿ ಸ್ವಾ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಸದಸ್ಯ ಸದಾಶಿವ ಬಂಗೇರ,ನಾಮ ನಿರ್ದೇಶಿತ ಸದಸ್ಯ ಸಿದ್ದೀಕ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಾಜಿ ಸದಸ್ಯ ರಪೀಕ್, ಮಾಜಿ ಟ್ರಿಬ್ಯುನಲ್ ಸದಸ್ಯ ಅಹ್ಮದ್ ಭಾವ ಯಾಸೀನ್ ,ಕೆ.ಡಿ.ಪಿ.ಸದಸ್ಯ ಉಮೇಶ್ ಬೋಳಂತೂರು, ಸಜೀಪ ಮುನ್ನೂರು ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ಶರೀಫ್ ನಂದಾವರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾತ ಕಾರ್ಯದರ್ಶಿ ಇಸ್ಮಾಯಿಲ್ ಪಡ್ಪು ಗುತ್ತಿಗೆದಾರ ಲತೀಫ್ ದಾಸರಗುಡ್ಡೆ, ನಿತಿನ್ ಬಂಗ್ಲೆಗುಡ್ಡೆ, ಪರ್ತಕರ್ತ ಆಶ್ರಫ್ ಉಪಸ್ಥಿತರಿದ್ದರು.

