ಮುಂಬಯಿ: ಬೃಹನ್ಮುಂಬಯಿ ಅಲ್ಲಿನ ಹೆಸರಾಂತ ಕೊಂಕಣಿ ನಾಟಕ ರಚನೆಕಾರ, ರಂಗ ಪ್ರವೀಣ ಹೆನ್ರಿ ಡಿ’ಸಿಲ್ವಾ ಸುರತ್ಕಲ್ ಸ್ವರಚಿತ ಚಿತ್ರಕಥೆಯೊಂದಿಗೆ ರಚಿಸಿ, ತನ್ನ ಸಂಸ್ಥಾಪನೆಯ ಕೆ.ನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್ ಮುಂಬಯಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ (ಕ್ಯಾಮ್) ಬ್ಯಾನರ್‍ನ ನಿರ್ಮಾಪಕತ್ವದಲ್ಲಿ ಸಿದ್ಧಗೊಳಿಸಿದ ಹೊಚ್ಚ ಹೊಸ ಕೊಂಕಣಿ ಚಲನಚಿತ್ರ `ನಶೀಬಾಚೊ ಖೇಳ್’ ಇಂದಿಲ್ಲಿ ಶನಿವಾರ ಸಂಜೆ ಜೆರಿಮೆರಿ ಅಲ್ಲಿನ ಮ್ಯಾಕ್ಸಸ್ ಸಿನೇಮಾಗೃಹದಲ್ಲಿ ಪ್ರೀಮಿಯರ್ ಶೋವಾಗಿ ಪ್ರದರ್ಶಿಸಲ್ಪಟ್ಟಿತು.

noshibacho-khelh-mumbai-8
noshibacho-khelh-mumbai-16

noshibacho-khelh-mumbai-4

ಮುಂಬಯಿ ಧರ್ಮಪ್ರಾಂತ್ರ್ಯದ ಬಿಷಪ್ ರೈ| ರೆ| ಪರ್ಸಿವಲ್ ಜೆ.ಇ ಫೆರ್ನಾಂಡಿಸ್ ಆಶೀರ್ವಚಿಸಿ ಮುಂಬಯಿಯಲ್ಲಿ ಈ ಫಿಲ್ಮ್‍ಗೆ ಚಾಲನೆಯನ್ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೊಡೇಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ’ಸೋಜಾ, ಗೌರವ ಮುಖ್ಯ ಅತಿಥಿಗಳಾಗಿ ರಂಗನಟ, ನಿರ್ದೇಶಕ ಫ್ರ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಫುಡಾರ್ ಪ್ರತಿಷ್ಠಾನದ ಅಧ್ಯಕ್ಷ ಜೋನ್ ಡಿ’ಸಿಲ್ವಾ, ಸಂಗೀತಗಾರ್ತಿ ನೆಫಿ ರೊಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

noshibacho-khelh-mumbai-38

noshibacho-khelh-mumbai-2

noshibacho-khelh-mumbai-29

ಮಹಾನಗರದಲ್ಲಿ ಸಾಮಾಜಿಕ ಕಳಕಳಿಯನ್ನಿರಿಸಿ, ಕಲಾವಿದರ ಪ್ರೋತ್ಸಾಹಕ್ಕಾಗಿ ಶ್ರಮಿಸುತ್ತಿರುವ ಕೆ.ನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್ ಮುಂಬಯಿ ನಲ್ವತ್ತರ ಸೇವೆಯನ್ನು ಬಿಷಪ್ ಪರ್ಸಿವಲ್ ಪ್ರಶಂಸಿಸಿ ಈ ಚಿತ್ರ ಕೊಂಕಣಿ ಪ್ರೋತ್ಸಾಹದ ಅದೃಷ್ಟವಾಗಿದೆ. ಭಾಷೆಯ ಬೆಳವಣಿಗೆ ಚಲನಚಿತ್ರಗಳೂ ಶಕ್ತಿಯುತ ಮಾಧ್ಯಮವಾಗಿದ್ದು ಪ್ರೇಕ್ಷಕರು ಬಹುಸಂಖ್ಯೆಯಲ್ಲಿ ವೀಕ್ಷಿಸಿದಾಗ ಚಲನಚಿತ್ರದೊಂದಿಗೆ ಭಾಷೆಯೂ ಅಭಿವೃದ್ಧಿಗೊಳ್ಳುವುದು ಎಂದು ಶುಭಾರೈಸಿದರು.

noshibacho-khelh-mumbai-5

noshibacho-khelh-mumbai-27

noshibacho-khelh-mumbai-23

ಸೈಂಟ್ ಜೂಡ್ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ಲ್ಯಾನ್ಸಿ ಪಿಂಟೋ, ಫಾ| ಗ್ಯಾಬ್ರಿಯಲ್ ಮರಿಯಾ, ಅಂಧೇರಿ ಪೂರ್ವದ ಸೆಕ್ರೇಡ್‍ಹಾರ್ಟ್ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ಲಾರೇನ್ಸ್ ಕೊರೆಯಾ, ಫಾ| ಜೋನ್ಸ್ ಸೆರವೋ, ಇನ್‍ಫೆಂಟ್ ಜೀಸಸ್ ಚರ್ಚ್ ಪಂತ್‍ನಗರ್ (ಘಾಟ್ಕೋಪರ್) ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ನೆಲ್ಸನ್ ಸಲ್ಡನ್ಹಾ, ಅವರ್ ಲೇಡಿ ಆಫ್ ಫಾತಿಮಾ ವಿದ್ಯಾವಿಹಾರ್ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ಫಿಲಿಪ್ ಗೋನ್ಸಾಲ್ವಿಸ್, ಫಾ| ಕಜಿತನ್ ಪಿರೇರಾ, ರೋಯ್‍ಸ್ಟಾನ್ ಫಿಲ್ಮ್‍ಸ್‍ನ ನಿರ್ದೇಶಕ ಫ್ರಾನ್ಸಿಸ್ ಟೋನಿ ಅಲ್ಮೇಡಾ, ಚಿತ್ರದ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್, ಚಲನಚಿತ್ರ ಪಾತ್ರಧಾರಿಗಳಾದ ವಿಲಿಯಂ ಮಚಾದೋ, ಫ್ರಾನ್ಸಿಸ್ ಒಲಿವೆರಾ, ಹೆಲೆನ್ ನೋರೊನ್ಹಾ ವಿೂರಾರೋಡ್, ಫೆಲಿಕ್ಸ್ ಡಿ’ಸೋಜಾ ಮಲ್ವಾಣಿ, ದಿವೋ ಸಂಪಾದಕ ಲಾರೇನ್ಸ್ ಕುವೇಲ್ಲೋ, ಲಿಯೋ ಫೆರ್ನಾಂಡಿಸ್ ಜೆರಿಮೆರಿ ಕಾಯಕ್ರಮದಲ್ಲಿ ಉಪಸ್ಥಿತರಿದ್ದು ಅತಿಥಿಗಳು ಅವರಿಗೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು.

noshibacho-khelh-mumbai-1

noshibacho-khelh-mumbai-11

ಹೆನ್ರಿ ಡಿ’ಸಿಲ್ವಾರ ನಿರ್ಮಾಪಕತ್ವದಲ್ಲಿ ಮೂಡಿಬಂದ `ನಶೀಬಾಚೊ ಖೇಳ್’ ಕೊಂಕಣಿ ಚಲನಚಿತ್ರವನ್ನು ಬಾಲಿವುಡ್ ಚಿತ್ರ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್ ನಿರ್ದೇಶಿಸಿದ್ದು ಬಹುಮುಖ ಪ್ರತಿಭೆ ಎಲ್ಟೆನ್ ಮಸ್ಕರ್ಹೇನಸ್ ನಾಯಕ ನಟನಾಗಿ ಅಭಿನಯಿದ್ದಾರೆ. ಹೆಸರಾಂತ ಗಾಯಕಿ ಎಸ್ತೇರ್ ನೊರೋನ್ಹಾ ನಾಯಕಿ ಪಾತ್ರದಲ್ಲಿ ಹಾಗೂ ತಾರಾಗಣದಲ್ಲಿ ರಂಜಿತ್ ಲೂವಿಸ್, ಪಾಂಡೇಶ್ವರ ಅಲ್ವಿನ್ ಅಂದ್ರಾದೆ, ಸುಜಾತಾ ಲೂವಿಸ್, ಸ್ಟೇನಿ ಅಲ್ವಾರೆಸ್, ಅರುಣ್‍ರಾಜ್ ಮತ್ತಿತರ ಕಲಾವಿದರು ಅಭಿನಯಿಸಿದ್ದಾರೆ.

noshibacho-khelh-mumbai-6

noshibacho-khelh-mumbai-13

ಚಲನಚಿತ್ರದ ರಚನೆಕಾರ, ನಿರ್ಮಾಪಕ ಹೆನ್ರಿ ಡಿ’ಸಿಲ್ವಾ ಸುರತ್ಕಲ್ ಪ್ರಸ್ತಾವಿಕ ನುಡಿಗಳನ್ನಾಡಿ ವಂದಿಸಿದರು. ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಈ ಚಲನಚಿತ್ರ ಇಂದಿನಿಂದ (ಅ.2ನೇ ಆದಿತ್ಯವಾರ ದಿಂದ 06ರ ಗುರುವಾರ ತನಕ) ದಿನಂಪ್ರತೀ ಸಂಜೆ 6.30 ಗಂಟೆಗೆ ಮುಂಬಯಿ ಜೆರಿಮೆರಿ ಅಲ್ಲಿನ ಮ್ಯಾಕ್ಸಸ್ ಸಿನೇಮಾಗೃಹದಲ್ಲಿ ಪ್ರದರ್ಶಿಸಲ್ಪಡಲಿದೆ. ಆಲ್‍ಲೈನ್ ಮೂಲಕ ಅಥವಾ ಮ್ಯಾಕ್ಸಸ್‍ನ ಬಾಕ್ಸ್ ಆಫೀಸ್ ಮೂಲಕ ಟಿಕೇಟು ಪಡಕೊಳ್ಳ ಬಹುದಾಗಿದೆ ಎಂದು ಹೆನ್ರಿ ಡಿ’ಸಿಲ್ವಾ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *