ಹೊಸದಿಲ್ಲಿ: ದೇಶದಲ್ಲಿನ ಕಪ್ಪುಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರಕ್ಕೆ ದೊಡ್ಡ ವಿಜಯವೇ ಲಭಿಸಿದೆ. ಸೆ.30ರಂದು ಕೊನೆಗೊಂಡ ಆದಾಯ ತೆರಿಗೆ ಘೋಷಣೆ ಯೋಜನೆಯಡಿ ಸರಕಾರ ಬರೋಬ್ಬರಿ 65,250 ಕೋಟಿ ರೂ.ಗಳನ್ನು ಬಾಚಿಕೊಂಡಿದೆ.
ಆದಾಯ ತೆರಿಗೆ ಘೋಷಣೆ ಯೋಜನೆಯಡಿ 64,274 ಮಂದಿ ಘೋಷಣೆ ಮಾಡಿಕೊಂಡಿದ್ದು 65,250 ಕೋಟಿ ರೂ. ಕಪ್ಪ ಹಣ ಹೊರ ಬಂದಿದೆ. ಈ ಮೊತ್ತವು “ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ” ಖಾತೆಗೆ ಜಮೆಯಾಗಲಿದೆ. ಇದನ್ನು ಸಾಮಾಜಿಕ ಯೋಜನೆಗಳಡಿ ಜನಕಲ್ಯಾಣಕ್ಕಾಗಿ ಬಳಸಲಾಗುವುದು ಎಂದು ವಿತ್ತ ಸಚಿವ ಅರುಣದ ಜೀತ್ಲಿ ಹೇಳಿದರು.
ಆದಾಯ ತೆರಿಗೆ ಘೋಷಿಸಿಕೊಳ್ಳುವ ಯೋಜನೆಯನ್ನು ಸರ್ಕಾರ ಕಳೆದ ಜೂನ್ 1ರಿಂದ ಆರಂಭಿಸಿತ್ತು. ಸೆ.30ರಂದು ಇದಕ್ಕೆ ಕೊನೇ ದಿನವಾಗಿತ್ತು. ಒಟ್ಟಾರೆಯಾಗಿ ನಾಲ್ಕು ತಿಂಗಳ ಕಾಲವಕಾಶವನ್ನು ಜನರಿಗೆ ನೀಡಲಾಗಿತ್ತು.
ಈ ಯೋಜನೆಯಡಿ ವ್ಯಕ್ತಿಯೊಬ್ಬ ತನ್ನ ಅಘೋಷಿತ ಆದಾಯ 100 ಲಕ್ಷ ಇದೆ ಎಂದು ಘೋಷಿಸಿಕೊಂಡಲ್ಲಿ ಆತ ತೆರಿಗೆ, ಸರ್ಚಾರ್ಜ್ ಮತ್ತು ದಂಡ ಸೇರಿ ಒಟ್ಟು 45 ಲಕ್ಷ ರೂ. ಸರಕಾರಕ್ಕೆ ಪಾವತಿಸುವ “ಭಾರೀ ರಿಯಾಯಿತಿಯ ಅವಕಾಶ”ವನ್ನು ಕಲ್ಪಿಸಲಾಗಿತ್ತು.
ಆದರೆ ಈ ದಂಡ ಮೊತ್ತವನ್ನು ಆತ ಇತರ ಅಘೋಷಿತ ಆದಾಯದಿಂದ ಪಾವತಿಸಿದರೆ ಆತನಿಗೆ ಈ ಯೋಜನೆಯಡಿ ಯಾವುದೇ ರಕ್ಷಣೆ ದೊರಕಲಾರದು ಎಂಬುದನ್ನು ಈ ಯೋಜನೆಯಲ್ಲಿ ಸ್ಪಷ್ಟಪಡಿಸಲಾಗಿತ್ತು.

