ಕಾರ್ಕಳ: ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಮಂಗಳೂರು  ಇದರ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆಯು ಇದೇ ಅಕ್ಟೋಬರ್ 2 ರಂದು ಕಾರ್ಕಳದ ಹೊಟೇಲ್ ಪ್ರಕಾಶ್ ನಲ್ಲಿ ಸಂಜೆ ಗಂಟೆ 4 ಕ್ಕೆ ಸರಿಯಾಗಿ ನಡೆಯಲಿದೆ.

patla

ಹಾಗೆಯೇ  ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಕಾರ್ಕಳ ಘಟಕದ ಉದ್ಘಾಟನಾ ಸಮಾರಂಭವು ನವಂಬರ್ 6 ನೇ ದಿನಾಂಕದಂದು ಕಾರ್ಕಳದಲ್ಲಿ ನಡೆಯಲಿದೆ.  ಯಕ್ಷಗಾನ ಕಲಾಭಿಮಾನಿಗಳು ಹಾಗೂ ಭಾಗವತ ಪಟ್ಲ ಸತೀಶ್ ಶೆಟ್ಟರ ಅಭಿಮಾನಿ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಕಳ ಘಟಕದ ಅಧ್ಯಕ್ಷರಾದ ಶ್ರೀ ಕೆ. ಗೋಪಾಲಕೃಷ್ಣ ಶೆಟ್ಟಿ ಕುಕ್ಕೂಂದೂರು, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಬಜಗೋಳಿ, ಕಾರ್ಯದರ್ಶಿ ಮಹಾವೀರ ಪಾಂಡಿ ಕಾಂತಾವರ ತಿಳಿಸಿರುತ್ತಾರೆ.

By suddi9

Leave a Reply

Your email address will not be published. Required fields are marked *