ಉಡುಪಿ: ಮಲ್ಪೆ ಕೊಡವೂರು ರೋಟರಿ ಕ್ಲಬ್ ವತಿಯಿಂದ ಇತ್ತೀಚೆಗೆ ಜಮ್ಮು ಕಾಶ್ಮಿರದ ಉರಿಯಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ಶೃದ್ಧಾಂಜಲಿ ಕಾರ್ಯಕ್ರಮ ಸೆ.28 ರಂದು ಕೊಡವೂರು ಸರ್ಕಲ್ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ವಿಲ್ಬರ್ಟ್ ಬ್ರಿಗೆಸ್ನಾ ಮಾತನಾಡಿ ಯೋಧರಿಗೆ ಗೌರವ ನೀಡುವುದು ನಮ್ಮ ಕರ್ತವ್ಯವಾಗಬೇಕು ನಾವು ಇಂದು ಉತ್ತಮ ಸ್ಥಿತಿಯಲ್ಲಿ ಜೀವನ ನಡೆಸಬೇಕಾದರೆ ಅವರು ಕಾರಣ ಅವರೇ ನಿಜವಾದ ಹಿರೋಗಳು ಎಂದರು.
ಅಧ್ಯಕ್ಷತೆಯನ್ನು ರೋಟರಿ ಅದ್ಯಕ್ಷ ಪ್ರಭಾತ್ ಕೋಟ್ಯಾನ್ ವಹಿಸಿದ್ದರು.ವೇದಿಕೆಯಲ್ಲಿ ಕೆ.ಎಂ.ಎಫ್ ಮಂಗಳೂರು ಅದ್ಯಕ್ಷ ಕೆ. ರವಿರಾಜ ಹೆಗ್ಡೆ,ರೋಟರಿ ಮಾಜಿ ಉಪರಾಜ್ಯಪಾಲ ಮಹೇಶ್ ಕುಮಾರ್,ಮಾಜಿ ವಲಯ ಸೇನಾನಿ ಪೂರ್ಣಿಮಾ ಜನಾರ್ಧನ್, ಜನಾರ್ಧನ್ ಕೊಡವೂರು.ಸುಂದರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

