ಮಂಗಳೂರು: ಭಾರತದ ಸೇನಾ ಕಾರ್ಯಾಚರಣೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಮಧ್ಯಾಹ್ನದ ವೇಳೆ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆಯೇ ಕರಾವಳಿಯಾದ್ಯಂತ ಮಂಗಳೂರು, ಉಡುಪಿ ಕಾಸರಗೋಡು, ಮಡಿಕೇರಿ ಹೀಗೆ ವಿವಿಧೆಡೆ ಪಟಾಕಿ ಸಿಡಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ಸುದ್ದಿ ಯೋಧರಿಗೆ ಅಭಿನಂದನೆಗಳ ಮಹಾಪೂರವೇ ಹರಿದಾಡಿತು. ಜೈಹಿಂದ್ ಘೋಷಣೆ, ಹೇಳಿಕೆಗಳು ಎಲ್ಲೆಲ್ಲೂ ಕೇಳಿಸಿತು.

1475208947138

ಮಂಗಳೂರಿನಲ್ಲಿ ಭಾರತೀಯ ಸೇನೆಯು ಪಾಕ್ ಭಯೋತ್ಪಾದಕ ನೀತಿಗೆ ಸೂಕ್ತ ಎದಿರೇಟು ನೀಡಿದೆ. ಈ ಮೂಲಕ ವಿನಾಕಾರಣ ಮಾತಾನಾಡುವವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಸೂಕ್ತ ಉತ್ತರ ನೀಡಿದ್ದಾರೆಂದು ವಿಧನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ ತಿಳಿಸಿದ್ದಾರೆ. ದ.ಕ ಜಿಲ್ಲಾ ಬಿ.ಜೆ.ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಾಗ ಅಕ್ರಮವಾಗಿ ದೇಶದೊಳಗೆ ನುಗ್ಗಿ ಸೈನಿಕರ ಹತ್ಯೆ ಮಾಡುತ್ತಿದ್ದ ಪಾಕ್ ಉಗ್ರರಿಗೆ ಇದು ಸರಿಯಾದ ಉತ್ತರ ಎಂದರು.

ಉಡುಪಿಯಲ್ಲಿ ಕಾರ್ಯಾಚರಣೆಗೆ ಹರ್ಷಪಡುತ್ತಾ, ಭಾರತೀಯ ಸೈನಿಕರ ಹತ್ಯೆಗೆ ಸೇನೆ ಪ್ರತೀಕಾರ ಮೂಲಕ ಸೂಕ್ತ ಉತ್ತರ ನೀಡಿದೆ. ದಿಟ್ಟ ನಿಲುವು ಪ್ರದರ್ಶಿಸಿದ ಪ್ರಧಾನಿ ಮೋದಿಯವರನ್ನು ಇಡೀ ದೇಶವೇ ಅಭಿನಂದಿಸುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *