ಮೂಡುಬಿದಿರೆ: ದುಶ್ಚಟಗಳಿಗೆ ಬಲಿಯಾದವರನ್ನು ಹೊರಗೆ ತೆಗೆಯುವುದು ಕಷ್ಟಕರವಾದ ಕೆಲಸ. ಪೂಜ್ಯ ಖಾವಂದರ ನೇತೃತ್ವದಲ್ಲಿ ಅಂತವರನ್ನು ಪುನಶ್ಚೇತನಗೊಳಿಸುವ ಶ್ರೇಷ್ಠ ಕೆಲಸ ನಡೆಯುತ್ತಿದೆ. ಮದ್ಯವ್ಯಸನಿಗಳ ಮನಃ ಪರಿವರ್ತನೆ ಮಾಡಿ ಮದ್ಯವರ್ಜನ ಶಿಬಿರದ ಮೂಲಕ ದುಶ್ಚಟಗಳಿಂದ ವ್ಯಸನಿಗಳನ್ನು ಮುಕ್ತಗೊಳಿಸಿ ಪುನರ್ಜನ್ಮ ನೀಡಲಾಗುತ್ತಿದೆ ಎಂದು ಉದ್ಯಮಿ ಶ್ರೀಪತಿ ಭಟ್ ಹೇಳಿದರು. ಮೂಡುಬಿದಿರೆ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಸಾವಿರದ ಮದ್ಯವರ್ಜನ ಶಿಬಿರದ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಬುಧವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮೂಡುಬಿದಿರೆ ಶ್ರೀದವಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ರವೀಶ್ ಕುಮಾರ್, ರಾಜೇಶ್ವರಿ ಇನ್ಫ್ರಾಟೆಕ್ ನ ಪ್ರವರ್ತಕ ದೇವಿ ಪ್ರಸಾದ್ ಶೆಟ್ಟಿ, ಮೂಡುಬಿದಿರೆ ಪುರಸಭಾ ಸದಸ್ಯ ದಿನೇಶ್ ಪೂಜಾರಿ, ರೊಟರಿ ಕ್ಲಬ್ ಆಪ್ ಮಿಡ್ ಟೌನ್ ಆದ್ಯಕ್ಷ ದೀರಜ್ ಕುಮಾರ್, ಧರ್ಮಸ್ಥಳ ಯೋಜನೆಯ ಮೂಡುಬಿದಿರೆ, ವಲಯಾದ್ಯಕ್ಷ ನಾರಾಯಣ ಪೂಜಾರಿ, ಮಾರ್ಪಾಡಿ ಒಕ್ಕೂಟದ ಅಧ್ಯಕ್ಷೆ ಸುಮನಾ ಆಚಾರ್ಯ, ಜ್ಯೋತಿನಗರ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ್, ತಿಪ್ಲೆಬೆಟ್ಟು ಒಕ್ಕೂಟದ ಅಧ್ಯಕ್ಷ ಕರುಣಾಕರ, ಪೂಪಾಡಿಕಲ್ಲು ಒಕ್ಕೂಟದ ಅದ್ಯಕ್ಷ ಕೃಷ್ಣ ವೇದಿಕೆಯಲ್ಲಿದ್ದರು. ಅನಿತಾ ಬಲ್ಲಾಳ್ ಸ್ವಾಗತಿಸಿದರು.ಗೀತಾ ಕಾರ್ಯಕ್ರಮ ನಿರೂಪಿಸಿದರು. ಮೋಹಿನಿ ವಂದಿಸಿದರು.

