ಸುಬ್ರಹ್ಮಣ್ಯ: ಭಾನುವಾರ ಮುಂಜಾನೆ ವೇಳೆ ಚಲಿಸುತ್ತಿದ್ದ ಬಸ್ಸ್ ನಿಂದ ಕುಮಾರ ಧಾರ ನದಿಗೆ ಹಾರಿದ ನಿರ್ವಾಹಕ ದೇವ್ ದಾಸ್(47) ನೀರಲ್ಲಿ ಕೊಚ್ಚಿ ಹೋದ ಘಟನೆ ಸೆ. 25 ರಂದು ಸಂಭವಿಸಿತ್ತು.

ಸೋಮವಾರ ಬೆಳಗ್ಗಿನಿಂದಲೇ ಪುತ್ತೂರಿನ ಅಗ್ನಿ ಶಾಮಕ ದಳ ಮತ್ತು ಗುಂಡ್ಯದ 15 ಮಂದಿ ನುರಿತ ಈಜುಗಾರರನ್ನು ಒಳಗೊಂಡು ಮುಳುಗು ತಜ್ಞರ ತಂಡ ಕುಮಾರಧಾರ ನದಿಯಲ್ಲಿ ಶೋಧ ಕಾರ್ಯ ನಡೆಸಿತ್ತು. ಈ ಮೂರು ದಿನಗಳ ನಿರಂತರ ಪ್ರಯತ್ನಗಳಿಂದ ಪಂಜ ಸಮೀಪ ಕಂಡಕ್ಟರ್ ಶವ ಪತ್ತಯಾಗಿದೆ.

