ಮೂಡುಬಿದಿರೆ: ಸರ್ವ ಸದಸ್ಯರ ಸಹಕಾರದಿಂದ 2015-16ನೇ ಸಾಲಿನಲ್ಲಿ ಬ್ಯಾಂಕ್ 49 ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು, 18,71,767 ರೂಪಾಯಿ ಲಾಭಗಳಿಸಿದೆ. ಪ್ರಸ್ತುತ ವರ್ಷ ಸದಸ್ಯರಿಗೆ ಶೇ.13 ಡೆವಿಡೆಂಟ್ ನೀಡಲಾಗುವುದು. 2021ರಲ್ಲಿ ಬ್ಯಾಂಕಿನ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ 100 ಕೋಟಿ ರೂಪಾಯಿ ವಾರ್ಷಿಕ ವ್ಯವಹಾರದ ಗುರಿ ಇರಿಸಲಾಗಿದೆ ಎಂದು ಕರಿಂಜೆ ಸೇವಾ ಸಹಕಾರಿ ಸಂಘ ತಾಕೊಡೆ ನಿಯಮಿತ ಇದರ ಅಧ್ಯಕ್ಷ ಜೆರಾಲ್ಡ್ ಮೆಂಡಿಸ್ ಹೇಳಿದರು.ಅವರು ಶನಿವಾರ ಸಂಘದ ಸಭಾಭವನದಲ್ಲಿ ಜರಗಿದ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

mbd_sep27_2-1

ಸದಸ್ಯರು ಬ್ಯಾಂಕಿನ ವ್ಯವಹಾರಗಳ ಸದುಪಯೋಗ ಪಡೆಯುವುದರ ಜೊತೆಗೆ ಯಶಸ್ವಿನಿ ವಿಮಾ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಹೇಳಿದರು. ಕಳೆದ ಸಾಲಿನಲ್ಲಿ ಮೃತರಾದ ಬ್ಯಾಂಕಿನ ಸದಸ್ಯರಿಗೆ ಶೃದ್ಧಾಂಜಲಿ ಸಲ್ಲಿಸಿ ಮೌನಾಚರಣೆ ನಡೆಸಲಾಯಿತು. ಕಳೆದ ಸಾಲಿನ ಮಹಾಸಭೆಯ ನಡವಳಿಗಳನ್ನು, ವಾರ್ಷಿಕ ವರದಿಯನ್ನು, ಪರಿಶೋಧಿತ ಲೆಕ್ಕಪತ್ರಗಳನ್ನು ಅಂಗೀಕರಿಸಲಾಯಿತು. 2017-18ನೇ ಸಾಲಿನ ಅಂದಾಜು ಆಯ-ವ್ಯಯ ಮಂಜೂರು ಮಾಡಲಾಯಿತು. ಮುಂದಿನ ಸಾಲಿಗೆ ಲೆಕ್ಕಪರಿಶೋಧಕರಾಗಿ ಸುಜಯ ಆಳ್ವ & ಕೊ. ಅವರನ್ನು ಆಯ್ಕೆ ಮಾಡಲಾಯಿತು.

ಸನ್ಮಾನ: ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಎಡ್ವರ್ಡ್ ರೆಬೆಲ್ಲೊ ತಾಕೊಡೆ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಬಾಲಪ್ರತಿಭೆ ಪಂಚಮಿ ಮಾರೂರು ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ನಿರ್ದೇಶಕರಾದ ಜೋನ್ ಮೆಂಡೋನ್ಸಾ, ಅಶ್ವಿನ್ ಪಿರೇರಾ, ಪಾವ್ಲ್ ಡಿಸೋಜಾ, ಮೆಲ್ವಿನ್ ಡಿಕೋಸ್ತಾ, ಎಡ್ವಿನ್ ಡಿಸೋಜಾ, ಜೆಸಿಂತಾ ಲೋಬೊ, ಪುಷ್ಪಾವತಿ ಉಪಸ್ಥಿತರಿದ್ದರು. ನಿರ್ದೇಶಕ ಶೇಖರ್ ಎಂ. ಪ್ರಾರ್ಥನೆಗೈದರು. ನಿರ್ದೇಶಕ ಜೋನ್ ರೇಗೊ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಫ್ರಾನ್ಸಿಸ್ ಮೆಂಡೋನ್ಸಾ ವರದಿ ವಾಚಿಸಿದರು. ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ವಂದಿಸಿದರು. ಸಂಘದ ಸಿಬ್ಬಂದಿ ಸಹಕರಿಸಿದರು.

By suddi9

Leave a Reply

Your email address will not be published. Required fields are marked *