ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುಕೊಣಾಜೆ ಕುಕ್ಕುದಕಟ್ಟೆಯಲ್ಲಿ ವಿವಾಹಿತನೋರ್ವನನ್ನು 12 ದಿನಗಳ ಹಿಂದೆ ಕೊಲೆ ಮಾಡಿ ಬಾವಿಗೆ ಎಸೆದ ಘಟನೆಗೆ ಸಂಬಂಧಿಸಿದ ಹಿನ್ನಲೆಯಲ್ಲಿ ನ್ಯಾಯಾಲಯವು ಆರೋಪಿಗಳಿರ್ವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಬಂಟ್ವಾಳ ತಾಲೂಕಿನ ಕೆದಿಲಾ ಗ್ರಾಮದ ಪೇರಾಮೊಗರು ಮನೆಯ ಕೃಷ್ಣಪ್ಪ ನಾಯ್ಕ್‍ರ ಪುತ್ರ ಜಯರಾಜ್ ನಾಯ್ಕ್(25) ತನ್ನ ಪತ್ನಿ ಅಶ್ವಿನಿಯ ಸಹಕಾರದಿಂದ ಆಕೆಯ ಪ್ರಿಯಕರ ಆನಂದ ಅವನಿಂದ ಕೊಲೆಯಾಗಿಯಾಗಿದ್ದ. ಈ ಪ್ರಕರಣದ ಸಂಬಂಧಿಸಿದಂತೆ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ವಿಧಿಸಲಾಗಿತ್ತು. ಆದರೆ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ಮೂಡುಬಿದಿರೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಸೋಮವಾರ ಪೊಲೀಸ್ ಕಸ್ಟಡಿಗೆ ನೀಡಿದೆ.

