ಮೂಡುಬಿದಿರೆ: ಎನ್.ಎಸ್.ಎ.ಎಂ. ಕಾಲೇಜು ನಿಟ್ಟೆಯಲ್ಲಿ ನಡೆದ ಮಂಗಳೂರು ವಿ.ವಿ. ಅಂತರ್ ಕಾಲೇಜು ಮಹಿಳೆಯರ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಕಾಲೇಜಿನ ತಂಡವು ಎನ್.ಎಸ್.ಎ.ಎಂ. ಕಾಲೇಜು ನಿಟ್ಟೆ ತಂಡವನ್ನು ಮಣಿಸಿ ಜೋಯ್ಸ್ ಪಾಯಸ್ ಮೆಮೋರಿಯಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಸೆಮಿಫೈನಲ್‍ನಲ್ಲಿ ಆಳ್ವಾಸ್ ತಂಡವು ಮಂಗಳೂರು ವಿ.ವಿ. ಕ್ಯಾಂಪಸ್ ತಂಡವನ್ನು ಮತ್ತು ಎನ್.ಎಸ್.ಎ.ಎಂ. ಕಾಲೇಜು ನಿಟ್ಟೆ ತಂಡವು ಎಂ.ಪಿ.ಎಂ. ಕಾಲೇಜು ಉಡುಪಿ ತಂಡವನ್ನು ಸೋಲಿಸಿ ಫೈನಲ್‍ಗೆ ತೇರ್ಗಡೆ ಹೊಂದಿದವು.

