ಮೂಡುಬಿದಿರೆ:ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ಇತ್ತೀಚೆಗೆ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಕೊಲೆಗೀಡಾದ ಜಯರಾಜ್ ನಾಯ್ಕ್‍ನ ಪತ್ನಿ ಅಶ್ವಿನಿ(23)ಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಸೆಪ್ಟಂಬರ್ 13ರಂದು ಅಶ್ವಿನಿಯ ಪ್ರಿಯಕರ ಸ್ಥಳೀಯ ಆನಂದ ಮೊಗೇರ ಎಂಬಾತ ಜಯರಾಜ್‍ನನ್ನು ಕುಕ್ಕುದಕಟ್ಟೆಯ ಆತನ ಪತ್ನಿ ಮನೆಯಲ್ಲಿ ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಕೊಲೆ ಮಾಡಿ ಬಳಿಕ ಶವವನ್ನು ಗೋಣಿಯಲ್ಲಿ ಕಟ್ಟಿ ಬಾವಿಗೆ ಎಸೆಯಲಾಗಿತ್ತು. ಶನಿವಾರ ಪ್ರಕರಣ ಬೆಳಕಿಗೆ ಬಮದಿತ್ತು. ಕೊಲೆಗೆ ಬಳಸಿದ ಕಬ್ಬಿಣದ ರಾಡ್ ಹಾಗೂ ಆರೋಪಿ ಓಡಾಡಲು ಉಪಯೋಗಿಸಿದ್ದ ಬೈಕನ್ನು ಪೊಲೀಸರು ಭಾನುವಾರ ವಶಕ್ಕೆ ಪಡಕೊಂಡು ತನಿಖೆ ನಡೆಸುತ್ತಿದ್ದಾರೆ. ಅಶ್ವಿನಿಯನ್ನು ಭಾನುವಾರ ಇಲ್ಲಿನ ಮ್ಯಾಜಿಸ್ಟ್ರೇಟ್ ನಿವಾಸಕ್ಕೆ ಹಾಜರುಪಡಿಸಿದಾಗ ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಲೆ ಪ್ರಕರಣದಲ್ಲಿ ಪ್ರಧಾನ ಆರೋಪಿ ಆನಂದ ಮೊಗೇರಾ ಮತ್ತು ಆತನ ಸ್ನೇಹಿತ ಶ್ರೀಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದು ಅವರಿಗೆ ಕೋರ್ಟ್ 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
