ಕೋಲ್ಕತ: ಕೇಂದ್ರ ಸರಕಾರದ ನಾನಾ ಪ್ರಯತ್ನಗಳ ನಡುವೆಯೂ ಈರುಳ್ಳಿ ಬೆಳೆ ಅಕ್ಟೋಬರ್‌ನಲ್ಲಿ 100 ರೂ. ತಲುಪುವ ಸಂಭವವನ್ನು ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ.
ಇತ್ತೀಚೆಗೆ ಸುರಿದ ಅಕಾಲಿಕವಾಗಿ ಸುರಿದ ಮಳೆಯೊಂದಿಗೆ, ಆಲಿಕಲ್ಲು ಸುರಿಮಳೆ ಹಾಗೂ ಮುಂಗಾರು ಮಳೆ ದುರ್ಬಲಗೊಂಡ ಕಾರಣ ನೀರುಳ್ಳಿ ಬೆಲೆಗೆ ಹೊಡೆತ ನೀಡಿದೆ. ರಫ್ತು ಹೆಚ್ಚಾಗಿರುವುದರಿಂದ ಭಾರತದ ಜನರಿಗೆ ಲಭ್ಯತೆ ಕಡಿಮೆಯಾಗಿದೆ. ಈರುಳ್ಳಿ ಹಾಗೂ ಆಲೂಗಡ್ಡೆ ಕೊರತೆ ಕಾಡುವ ಅಪಾಯ ಮನಗಂಡ ಸರಕಾರ ರಫ್ತು ಮಾಡುವುದಕ್ಕೂ ಒಂದಿಷ್ಟು ನಿರ್ಬಂಧಗಳನ್ನು ಹೇರಿದೆ. ಅಷ್ಟಾದರೂ ಮುಂದಿನ ತಿಂಗಳುಗಳಲ್ಲಿ ಈರುಳ್ಳಿ ಬೆಲೆ ಒಂದೇ ಸಮನೆ ಹೆಚ್ಚಾಗಲಿದ್ದು, ಆಲೂಗಡ್ಡೆ ದರ ಇಳಿದು ಮತ್ತೆ ಏರುವ ಸಾಧ್ಯತೆಗಳು ಗೋಚರಿಸಿವೆ.

ಕನಿಷ್ಠ ರಫ್ತು ದರ ಹೇರುವುದು ಮತ್ತು ಹಾಗೂ 2013-14ರಲ್ಲಿ ಉತ್ಪಾದನೆ 192 ಲಕ್ಷ ಟನ್‌ಗೆ ತಲುಪುವ ಮೂಲಕ ಶೇ.14ರಷ್ಟು ಏರಿಕೆಯಾಗುವ ಅಧಿಕೃತ ಅಂದಾಜುಗಳಿದ್ದರೂ ದೇಶದ ನಾನಾ ಭಾಗಗಳ ಚಿಲ್ಲರೆ ಮಾರಾಟಗಾರರಲ್ಲಿ ಕೆಜಿಗೆ 20-30 ರೂ. ದರಕ್ಕೆ ಗ್ರಾಹಕರಿಗೆ ಸದ್ಯ ಲಭ್ಯವಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಹಿಂಗಾರಿನ ಬೆಳೆಗಳು ಪ್ರತಿಕೂಲ ಹವಾಮಾನದಿಂದ ಹಾಳಾಗಿರುವುದರಿಂದ ಈಗಾಗಲೇ ಬೆಲೆ ನಿಧಾನವಾಗಿ ಏರಿಕೆಯಾಗುವ ಲಕ್ಷಣ ತೋರ್ಪಡಿಸಿದೆ. ಆದರೆ ಮಳೆಹಾನಿ ನಷ್ಟವನ್ನು ಇನ್ನೂ ಅಂದಾಜಿಸಿಲ್ಲ. ಈ ನಡುವೆ, ಮಾರುಕಟ್ಟೆಯಲ್ಲಿ ಬೀಜಗಳ ಬೆಲೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.400ಕ್ಕೇರಿದೆ. ಇದು ಈ ಬೆಳೆಯ ಕೃಷಿಯನ್ನು ಕುಂಠಿತಗೊಳಿಸಲಿದೆ ಎಂದು ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಇದೆಲ್ಲದರ ಪರಿಣಾಮವಾಗಿ ಕೆಜಿ ಈರುಳ್ಳಿ ಬೆಲೆ ಅಕ್ಟೋಬರ್‌ನಲ್ಲಿ 100ರೂ.ಗೆ ಏರುವ ಸಾಧ್ಯತೆಯಿದೆ ಎಂದು ಪ್ರಮುಖ ಕೈಗಾರಿಕೆ ಅಧಿಕಾರಿ ಹೇಳುತ್ತಾರೆ. ಈರುಳ್ಳಿ ಬೆಲೆಗಳ ಜತೆಗೆ ರಾಜಕೀಯ ಸಂವೇದನೆ ತಳುಕು ಹಾಕುವುದರಿಂದ ಅವರು ತಮ್ಮ ಹೆಸರು ಉಲ್ಲೇಖಿಸುವುದನ್ನುಇಷ್ಟಪಡುತ್ತಿಲ್ಲ. ದೇಶದ ಪ್ರಮುಖ ವ್ಯಾಪಾರಿಗಳು ಮತ್ತು ಸರಕಾರಿ ಕಚೇರಿ ಈ ಅಂದಾಜು ಸರಿಯಾಗುವ ಅಪಾಯವನ್ನು ಒಪ್ಪಿಕೊಂಡಿದ್ದಾರೆ.
