ಶ್ರೀನಗರ: ಹದಿನೇಳು ವರ್ಷದ ಬಾಲಕಿಯ ಮೇಲೆ 3 ಮಂದಿ ಕಾಮಾಂಧ ತರುಣರು ಗ್ಯಾಂಗ್ ರೇಪ್ ಎಸಗಿರುವ ಘಟನೆ ಕಾಶ್ಮೀರದ ಬಾರಾಮೂಲಾ ಜಿಲ್ಲೆಯಲ್ಲಿ ನಡೆದಿದ್ದು ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂ.14ರಂದು ತರುಣಿಯು ಬೋನಿಯಾರ್ ಎಂಬಲ್ಲಿ ತನ್ನ ಸಂಬಂಧಿಕರ ಮದುವೆಗೆಂದು ಹೋಗಿದ್ದಾಗ ತನ್ನ ಮೇಲೆ 3 ತರುಣರು ಸಾಮೂಹಿಕ ಅತ್ಯಾಚಾರ ಕೃತ್ಯ ಎಸಗಿದರು ಎಂದು ಹುಡುಗಿ ಹಾಗೂ ಆಕೆಯ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ.
ಹುಡುಗಿಯು ಮನೆಯಿಂದ ಹೊರಬಿದ್ದೊಡನೆಯೇ ಆಕೆಯನ್ನು ಅಪಹರಿಸಲಾಗಿ ಕೇವಲ 1 ಕಿ.ಮೀ. ದೂರದಲ್ಲಿರುವ ನಿರ್ಜನ ಅರಣ್ಯಕ್ಕೆ ಒಯ್ದು ಅಲ್ಲಿ ಆರೋಪಿ ತರುಣರು ಸರದಿ ಪ್ರಕಾರ ಅತ್ಯಾಚಾರ ಎಸಗಿದರು.

