ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ನವರಾತ್ರಿ ಪೂಜಾ ಮಹೋತ್ಸವ ಅ.1ರಿಂದ ಅ.10 ವಿಜಯದಶಮಿಯವರೆಗೆ ನಡೆಯಲಿದೆ. ಇದರ ಪ್ರಯುಕ್ತ ಈ ಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ.

ವಿಶೇಷ ದಿನಗಳು:
ಅ.10ರಂದು ಮಹಾನವಮಿ ಪ್ರಯುಕ್ತ ದೇವಳದ ವತಿಯಿಂದ ಚಂಡಿಕಾ ಹೋಮವೂ ಜರಗಲಿರುವುದು. ಹಾಗೂ ಅ.1ರಿಂದ ನವರಾತ್ರಿಯ ಎಲ್ಲಾ ದಿನಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ 9 ರಿಂದ ನವರಾತ್ರಿ ಪೂಜೆ ಹಾಗೂ ಮಧ್ಯಾಹ್ನ ಭಕ್ತಾದಿಗಳಿಂದ ಹರಕೆಯ ಚಂಡಿಕಾ ಹೋಮವೂ ಜರಗಲಿರುವುದು. ಪ್ರತಿದಿನ ರಾತ್ರಿ 9 ರಿಂದ ಮಹಾಪೂಜೆ ಜರಗಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮ:
ದೇವಳದ ಸನ್ನಿಧಿಯಲ್ಲಿ ಪ್ರತಿನಿತ್ಯ ಸಂಜೆ 6 ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.1ರಂದು ‘ಪೊಳಲಿ ಯಕ್ಷೋತ್ಸವ’ ಯಕ್ಷ ಕಲಾ ಪೊಳಲಿ ಇದರ 21 ನೇ ವಾರ್ಷಿಕೋತ್ಸವ ಅಂಗವಾಗಿ ಯಕ್ಷ-ಗಾನ-ಪಂಚಾಮೃತ, ಸನ್ಮಾನ. ರಾತ್ರಿ 9.30ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ಸುಕನ್ಯಾ ಕಲ್ಯಾಣ-ರುಕ್ಮಿಣಿ ಕಲ್ಯಾಣ-ರತಿ ಕಲ್ಯಾಣ. ಅ.2 ರಂದು ರಾಜ್ಯ ಪ್ರಶಸ್ತಿ ವಿಜೇತೆ ಅಂಧ ಕಲಾವಿದೆ ಕು| ಕಸ್ತೂರಿ ಇವರಿಂದ ‘ಭಕ್ತಿ ಭವಗಾನ’ ರಾತ್ರಿ 7.30 ರಿಂದ 9.30ರ ತನಕ ಆರ್ಟ್ ಆಫ್ ಲಿವಿಂಗ್ ಮಂಗಳೂರು ಹಾಗೂ ರವಿಶಂಕರ್ ವಿದ್ಯಾ ಮಂದಿರ ಕೊಂಚಾಡಿ ಇವರಿಂದ (ಗಾನ-ಜ್ಞಾನ ಹಾಗೂ ಧ್ಯಾನಗಳ ಸಂಗಮ) ಸತ್ಸಂಗ. ಅ.3 ರಂದು ‘ವಾದ್ಯ ಸಂಗೀತ’ , ಸ್ಯಾಕೋಫೋನ್- ರಾಜೇಶ್ ಆರ್.ಕೆ.ತವಿಲ್ ಕರುಣಾಕರ್ ದೇವಾಡಿಗ ಪೊಳಲಿ, ಗಿಟಾರ್-ಶರತ್, ತಬಲ-ಸುರೇಶ್, ಪ್ಯಾಡ್-ರಾಜೇಶ್. ರಾತ್ರಿ 8 ರಿಂದ 10ರ ತನಕ “ಸ್ಟಾರ್ ಕಿಡ್ಸ್ ಶ್ರೀ ಕೃಷ್ಣ ಮಿತ್ರ ಮಂಡಳಿ” ಗುರುಪುರ ಇವರಿಂದ ‘ನೃತ್ಯ ವೈವಿಧ್ಯ’. ಅ.4 ರಿಂದ ಶಿವರಂಜಿನಿ ಮ್ಯೂಸಿಕಲ್ ಪೊಳಲಿ ಇವರಿಂದ ‘ಗಾನ-ನೃತ್ಯ-ಸಂಭ್ರಮ’. ಅ.5ರಂದು ಯಕ್ಷಗಾನ ತಾಳಮದ್ದಲೆ ‘ಸುದರ್ಶನ ವಿಜಯ’. ಅ.6 ರಂದು ರಂಗಿತರಂಗ ಕಲಾವಿದರು ಕಾಪು ಇವರಿಂದ ತುಳು ಹಾಸ್ಯಮಯ ನಾಟಕ ‘ಇಂದ್ರಾಳಿ ಜಂಕ್ಷನ್’. ಅ.7 ರಂದು ಬಂಗಾರ್ ಕಲಾವಿದರು ಗಂಜಿಮಠ ಇವರಿಂದ ತುಳು ಹಾಸ್ಯಮಯ ನಾಟಕ ‘ನಮ ಎನ್ನಿಲೆಕ್ಕ ಅತ್ತ್’ ಅ.8ರಂದು ರಾಮಕೃಷ್ಣ ತಪೋವನ ಪೊಳಲಿ ಬಾಲಕಾಶ್ರಮದ ಮಕ್ಕಳಿಂದ ಯಕ್ಷಗಾನ ಬಯಲಾಟ ‘ಶ್ವೇತಕುಮಾರ ಚರಿತ್ರೆ’(ಶಿವ ಪಂಚಾಕ್ಷರಿ ಮಹಿಮೆ). ಅ.9 ರಂದು ಸಂಜೆ 6 ರೀಮದ 8 ರತನಕ ವಿದುಷಿ ಸೌಮ್ಯ ಸುಧೀಂದ್ರರಾವ್ ನೃತ್ಯಸುಧಾ ಮಂಗಳೂರು ಇವರಿಂದ ‘ಭರತನಾಟ್ಯ’. ಸಂಜೆ 8ರಿಂದ 9.30ರ ತನಕ ವಿದುಷಿ ಲತಾ ಶಶಿಧರ್ “ನೃತ್ಯಂ” ಕಾಸರಗೋಡು ಇವರ ಕೈಕಂಬದ ಶಿಷ್ಯರಿಂದ ‘ಭರತನಾಟ್ಯ’. ಅ.10 ರಂದು ಸಂಜೆ 5ರಿಂದ ‘ನವರಾತ್ರಿ ವೇಷಗಳ ವೈಭವ’ ಜರಗಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.
