ಬಂಟ್ವಾಳ: ಜಿಲ್ಲಾ ಲೀಡ್ ಬ್ಯಾಂಕ್ ಮಂಗಳೂರು,ಬಂಟ್ವಾಳ ತಾಲೂಕಿನ ಎಲ್ಲಾ ಬ್ಯಾಂಕ್ಗಳು, ತಾಲೂಕು ಪಂ.ಬಂಟ್ವಾಳ ಮತ್ತು ಕಂದಾಯ ಇಲಾಖೆ ಬಂಟ್ವಾಳ ಇವರ ಸಹಯೋಗದಲ್ಲಿ ವಿಶೇಷ ಆರ್ಥಿಕ ಸೇರ್ಪಡೆ ಅಭಿಯಾನ ಕಾರ್ಯಕ್ರಮ ತಾಲೂಕು ಪಂ.ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು. 
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಗ್ರಾಮೀಣ ಭಾಗದ ಆರ್ಥಿಕತೆಯನ್ನು ಅಭಿವೃದ್ದಿ ಪಡಿಸುವ ಯೋಜನೆ ಅತ್ತ್ಯುತ್ತಮ ವಾದುದು, ಈ ಯೋಜನೆಯ ಮೂಲಕ ಗ್ರಾಮದ ಜನರಿಗೆ ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿ ಎಂದರು. ಯೋಜನೆಗಳ ಬಗ್ಗೆ ವಿಶೇಷ ಮಾಹಿತಿ ನೀಡುವ ಮೂಲಕ ಗಾಮೀಣ ಪ್ರದೇಶದ ಕಡು ಬಡವರಿಗೂ ಪ್ರಯೋಜನ ಸಿಗುವಂತಾಗಲಿ ಎಂದರು.
ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷೀ ಸಿ ಬಂಗೇರ, ತಾ.ಪಂ.ಕಾರ್ಯನಿರ್ವಾಣಾಧಿಕಾರಿ ಸಿಂಪ್ರಿಯಾನದ ಮಿರಾಂದ, ತಹಶೀಲ್ದಾರ್ ಪುರಂದರ ಹೆಗ್ಡೆ, ಜ್ಞಾನ ಜ್ಯೋತಿಯ ಕೌನ್ಸಿಲರ್ ಜಯಂತ್ ಶೆಟ್ಟಿ ಮತ್ತು ಲೀಡ್ ಬ್ಯಾಂಕ್ನ ಮುಖ್ಯ ಪ್ರಬಂಧಕ ರಾಘವ ವಿ.ಯಜಮಾನ ಉಪಸ್ಥಿತರಿದ್ದರು ಈ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ಶಾಖೆಯ ಮ್ಯಾನೇಜರ್ ಸಪ್ನಾಭಾಸ್ಕರ ಸ್ವಾಗತಿಸಿ ವಂದಿಸಿದರು.
