ಬಂಟ್ವಾಳ: ನಾಡಹಬ್ಬ ದಸಾರದ ಸಂದರ್ಭದಲ್ಲಿ ಶಾಲೆಗಳಿಗೆ ನೀಡುತ್ತಿದ್ದ ರಜೆಯನ್ನು ಶಿಕ್ಷಣ ಇಲಾಖೆ ಮೊಟಕುಗೊಳಿಸಿದ್ದು, ಈ ಕೂಡಲೇ ತಮ್ಮ ತಪ್ಪನ್ನು ಸರಿಪಡಿಸಿ ಅ. 2 ರಿಂದಲೇ ದಸರಾ ರಜೆ ನೀಡುವಂತೆ ಬಂಟ್ವಾಳ ತಾಲೂಕು ಹಿಂದೂ ಜಾಗರಣಾ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.

dsc_5143

ಈ ಕುರಿತಾಗಿ ಬಂಟ್ವಾಳ ತಹಶೀಲ್ದಾರರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಹಿಂದೂ ಜಾಗರಣಾ ವೇದಿಕೆ, ಹಿಂದುಗಳು ಹಾಗೂ ಕನ್ನಡಿಗರ ಧಾರ್ಮಿಕ ಭಾವನೆಯನ್ನು ಗೌರವಿಸುವಂತೆ ಒತ್ತಾಯಿಸಿದೆ.ಹಿಂದುಗಳಲ್ಲದವರ ನಂಬಿಕೆ-ಭಾವನೆ-ಆಚರಣೆಗಳ ಬಗ್ಗೆ ಅತೀವ ಕಾಳಜಿವಹಿಸುವ ಇಲಾಖೆ ಮತ್ತು ಸರಕಾರ ಹಿಂದುಗಳ ಬಗ್ಗೆ ಏಕೆ ಈ ತಾರತಮ್ಯ ನೀತಿ ಅನುಸರಿಸುತ್ತಿದೆ. ಇಂತಹ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಾಕುವ ನೀತಿ ಸಾಮಾಜಿಕ ಸಾಮರಸ್ಯಕ್ಕೂ ಧಕ್ಕೆ ಉಂಟು ಮಾಡುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದ್ದು, ಅಕ್ಬೋಬರ್ ತಿಂಗಳ 2ನೇ ತಾರೀಕಿನಿಂದಲೇ ರಜೆ ಸಾರುವ ಮೂಲಕ ಇಲಾಖೆ ಮತ್ತು ಸರಕಾರ ತನ್ನ ಕರ್ತವ್ಯವನ್ನು ಪೂರೈಸಿ, ಹಿಂದುಗಳ-ಕನ್ನಡಿಗರ ಧಾರ್ಮಿಕ ಭಾವನೆ ಮತ್ತು ಸ್ವಾತಂತ್ರ್ಯಕ್ಕೆ ಗೌರವ ನೀಡಬೇಕೆಂದು ವೇದಿಕೆ ಒತ್ತಾಯಿಸಿದೆ.

ಈ ಸಂದರ್ಭ ವೇದಿಕೆಯ ತಾಲೂಕು ಸಂಚಾಲಕ ಪ್ರಶಾಂತ್ ಕೆಂಪುಗುಡ್ಡೆ, ಪ್ರಮುಖರಾದ ರವಿರಾಜ್ ಬಿ.ಸಿ.ರೋಡು, ಚಂದ್ರ ಕಲಾಯಿ, ಬಾಲಕೃಷ್ಣ ಕಲಾಯಿ,ಜಿಲ್ಲಾ ಸಂಚಾಲಕ ರತ್ನಾಕರ ಶೆಟ್ಟಿ ಕಲ್ಲಡ್ಕ, ಸತೀಶ್ ಶೆಟ್ಟಿ, ವೆಂಕಟೇಶ್ ಮೊದಲಾವರಿದ್ದರು.

By Suddi9

Leave a Reply

Your email address will not be published. Required fields are marked *