ಮುಂಬಯಿ : ಶ್ರೀ ಕ್ಷೇತ್ರ ಕಟೀಲಿನ ಮಾತನಾಡುವ ದೇವರೆಂದೇ ಭಕ್ತರು ನಂಬಿಕೊಂಡಿರುವ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 15ನೆಯ ವರ್ಷದ ಸಂಸ್ಮರಣಾ ಕಾರ್ಯಕ್ರಮ ಸೆ. 18 ರಂದು ಕುರ್ಲಾ ಪೂರ್ವ ಭಂಟರ ಭವನದ ಸಭಾಗೃಹದಲ್ಲಿ ಜರಗಿದ್ದು ಶ್ರೀ ಕ್ಷೇತ್ರ ಅನುವಂಶಿಕ ಅರ್ಚಕ ಶ್ರೀ ಲಕ್ಷೀನಾರಾಯಣ ಆಸ್ರಣ್ಣರು ಆಶೀರ್ವಚನ ನೀಡುತ್ತಾ ನನ್ನ ತೀರ್ಥರೂಪರ ಬಗ್ಗೆ ನನಗಿಂತಲೂ ನಿಮಗೆ ಹೆಚ್ಚಿನವರಿಗೆ ತಿಳಿದಿದೆ. ನನ್ನ ತಂದೆ ಸಂಪಾದಿಸಿದನ್ನು ಧಾರ್ಮಿಕ ಕಾರ್ಯಕ್ಕೆ ವಿನಿಯೋಗಿಸುದರೊಂದಿಗೆ ದಾನ ಮಾಡುತ್ತಿದ್ದರು. ಇದರಿಂದಾಗಿ ಅವರು ಎಲ್ಲರಿಗೂ ಪ್ರಾರ್ಥಸ್ಮರಣೀಯರು. ಎಲ್ಲರೂ ಅವರನ್ನು ಅತ್ಮೀಯವಾಗಿ ಗೌರವಿಸಿದವರು. ಅವರ ಚಿಂತನೆ ಮುಂದಿನ ಜನಾಂಗಕ್ಕೆ ದಾರಿದೀಪವಾಗಲಿ ಎಂದು ನುಡಿದರು.

dsc_0014

dsc_0061

ಕಳೆದ 15​ ​ ವರ್ಷಗಳಿಂದ ಪದ್ಮನಾಭ ಕಟೀಲು ಅವರು ವಿದೇಶದಿಂದ ಇಲ್ಲಿಗಾಗಮಿಸಿ ನಿಮ್ಮೆಲ್ಲರ ಸಹಕಾರದಿಂದ ನಾಡಿನ ಕಲಾವಿದರನ್ನು ಒಂದುಗೂಡಿಸಿ ಇಲ್ಲಿ ಯಕ್ಷಗಾನವನ್ನು ನಡೆಸುದರೊಂದಿಗೆ ಅವರನ್ನು ಸನ್ಮಾನಿಸುತ್ತಿರುವುದು ಇದು ಅವರ ಸಾಧನೆಯಾಗಿದ್ದು ದೇವರ ದಯೆ ಅವರಿಗೆ ಕೂಡಿ ಬಂದಿದೆ. ಈ ಸತ್ಕರ್ಮದ ಪುಣ್ಯ ಎಲ್ಲರಿಗೂ ಲಭಿಸಲಿ, ಎಂದು ಆಸ್ರಣ್ಣರು ನುಡಿದರು. ಸ್ಮರಣ ಸಂಚಿಕೆ ’ಮಹತೀ’ ಯನ್ನು ಶ್ರೀ ಲಕ್ಷೀನಾರಾಯಣ ಆಸ್ರಣ್ಣರು ಬಿಡುಗಡೆಗೊಳಿಸಿದರು.

dsc_0056
dsc_0076

ಶ್ರೀ ಕ್ಷೇತ್ರದ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣರು ಮಾಡುತ್ತಾ ಕಟೀಲಿನ ಶಖ ಪುರುಷರಾದ ದೊಡ್ಡಪ್ಪ ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆಯು ಪದ್ಮನಾಭ ಕಟೀಲು ಅವರು ಮೂಲಕ ಮುಂಬಯಿಯಲ್ಲಿಯೂ ನಡೆಯುತ್ತಿದ್ದು ಈ 15ನೆಯ ವರ್ಷದ ಕಾರ್ಯಕ್ರಮಕ್ಕೆ ನಾನು ಆಗಮಿಸಿ ಸಂತೋಷಪಟ್ಟಿರುವೆನು. 1944 ರಲ್ಲಿ ಕಟೀಲಿಗೆ ಬಹಳ ದೊಡ್ಡದಾದ ನೆರೆ ಬಂದಿದ್ದು ದೇವಸ್ಥಾನದಲ್ಲಿ ಉಳಿದ ಮೂರು ಪ್ರಮುಖ ವಾದ ವಸ್ತುಗಳ ಬಗ್ಗೆ ಮಾತನಾಡುತ್ತಾ ಅದನ್ನು ನಾವು ಆಪತ್ತು ಅಲ್ಲ ಎಂದು ಆ ನಂತರ ಹೇಳಬೇಕಾಯಿತು. ಯಾಕೆಂದರೆ 1954 ರಲ್ಲಿ ಅಭಿವೃದ್ದಿಯಾದ ಈ ದೇವಸ್ಥಾನವು ಗೋಡೆಗಳು ಬಹಳ ಬಲಿಷ್ಟವಾಗಿದೆ ಎನ್ನುತ್ತಾ ಮಹಾ ದಾನಿಯಾಗಿದ್ದ ತನ್ನ ದೊಡ್ಡಪ್ಪ ಗೋಪಾಲಕೃಷ್ಣ ಆಸ್ರಣ್ಣರ ವ್ಯಕ್ತಿತ್ವದ ಬಗ್ಗೆ ತಿಳಿಸಿದರು.

dsc_0083

ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಪ್ರಭಾಕರ ಎಲ್. ಶೆಟ್ಟಿಯವರು ಮಾತನಾಡುತ್ತಾ ಪದ್ಮನಾಭ ಕಟೀಲರ ಸಾಧನೆಯ ಬಗ್ಗೆ ಮಾತನಾಡುತ್ತಾ ಜಗತ್ಪ್ರಸಿದ್ದವಾದ ಕಟೀಲು ಕ್ಷೇತ್ರ ತುಳು ನಾಡಿನ ಹೆಮ್ಮೆಯ ಧಾರ್ಮಿಕ ಕ್ಷೇತ್ರವಾಗಿದ್ದು ಗೋಪಾಲಕೃಷ್ಣ ಆಸ್ರಣ್ಣರ ಆಶೀರ್ವಾದ ನಮಗೆಲ್ಲರಿಗೂ ಸಿಗಲಿ ಎಂದರು.

dsc_0048

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮನಿಪೋಳ್ಡ್ ಕ್ರೆಡಿಟ್ ಸೊಸೈಟ್ ಯ ಕಾರ್ಯಾಧ್ಯಕ್ಷ, ಕಡಂದಲೆ ಸುರೇಶ್ ಭಂಡಾರಿಯವರು ಇಂತಹ ದಾರ್ಮಿಕ ಕಾರ್ಯಕ್ರಮದಲ್ಲಿನ ಧಾರ್ಮಿಕ ಮಾತುಗಳನ್ನು ಕೇಳುದರಿಂದ ನಮ್ಮ ಆತ್ಮ ಶುದ್ಧತೆಗೆ ಪೂರಕವಾಗುತ್ತದೆ. ಬದುಕಿದಾಗ ಮಾಡಿದ ಉತ್ತಮ ಕೆಲಸವು ಸದಾ ಜೀವಂತವಾಗಿ ಉಳಿಯುತ್ತದೆ. ಗೋಪಾಲಕೃಷ್ಣ ಆಸ್ರಣ್ಣರ ಈ ಸಂಸ್ಮ್ರಣಾ ಕಾರ್ಯದಿಂದಾಗಿ ನಮಗೆಲ್ಲರಿಗೂ ಚೈತನ್ಯ ಮೂಡಿ ಬಂದಿದೆ. ಕಾಲ ನಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದರೆ ಯಕ್ಷಗಾನವು ನಮ್ಮನ್ನು ಹಿಂದಕ್ಕೆ ಕೊಂಡೊಯುತ್ತಾ ನಮ್ಮ ಸಂಸ್ಕೃತಿಯನ್ನು ನೆನಪಿಸುತ್ತದೆ. ಶಿಕ್ಷಣದೊಂದಿಗೆ ನಾವು ನಮ್ಮ ಮಕ್ಕಳಿಗೆ ಇಂತಹ ಸಂಸ್ಕ್ಟುತಿಯನ್ನು ತಿಳಿಸಬೇಕಾಗಿದೆ ಎಂದರು.dsc_0037

ಧರ್ಮದರ್ಶಿ ಎಸ್. ಎನ್. ಉಡುಪ ಅವರು ಯಕ್ಷಗಾನದ ಕಂಪಿನೊಂದಿಗೆ ಯಕ್ಷಗಾನದ ಕೀರ್ತಿ ಪತಾಕೆಯನ್ನು ವಿದೇಶದಲ್ಲಿಯೂ ಹಾರಿಸಿದ ಪದ್ಮನಾಭ ಕಟೀಲರ ಕಾರ್ಯವನ್ನು ಮೆಚ್ಚಿದರು.

dsc_0041

ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತು ಇದರ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆಯವರು ಸಮಾರಂಭಕ್ಕೆ ಶುಭ ಹಾರೈಸುತ್ತಾ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಪ್ರಥಮ ಸಂಸ್ಮರಣಾ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದು ಇದೀಗ ಅವರ ಹದಿನೈದನೆಯ ಸಂಸ್ಮರಣಾ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಸೌಭ್ಯಾಗ್ಯ ಎಂದರು.

dsc_0084

ಐಕಳ ಗುಣಪಾಲ್ ಶೆಟ್ಟಿ ಶೆಟ್ಟಿಯವರು ಬಾಲ್ಯದಲ್ಲಿನ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಜೊತೆಗಿನ ತನ್ನ ಅನುಭವದ ಮಾತನ್ನು ಹೇಳುತ್ತಾ ನಾನರವನ್ನು ಬಹಳ ಹತ್ತಿರದಿಂದ ನೋಡಿದ್ದು ಅವರು ನಿಜವಾಗಿಯೂ ಮಹಾದಾನಿಯಾಗಿದ್ದರು. ದೇವಿಮಹಾತ್ಮೆ ಯಕ್ಷಗಾನವನ್ನು ಬಂಟರ ಸಂಘದ ಪದಾಧಿಕಾರಿಗಳಾಗಿದ್ದ ನಾವು ಈ ವೇದಿಕೆಯಲ್ಲಿ ಸ್ವತ ವೇಶ ಧರಿಸಿ ಪ್ರದರ್ಶಿಸಿದ್ದು ಇಂದು ಈ ಪ್ರದರ್ಶನವನ್ನು ನೋಡುವಾಗ ತುಂಬಾ ಸಂತೋಷವಾಗುತ್ತಿದೆ ಎಂದರು.

dsc_0080

ಬೆಹರಿನ್ ಬಿಲ್ಲವಾಸ್ ನ ಅಧ್ಯಕ್ಷ ರಾಜ್ ಕುಮಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಶ್ರೀ ದೇವಿಯ ಕೃಪೆಯಿಂದಾಗಿ ವಿದೇಶದಲ್ಲಿದ್ದು ಪದ್ಮನಾಭ ಅವರು ಇಂತಹ ಕಾರ್ಯಕ್ರಮವನ್ನು ತಪ್ಪದೇ ನಡೆಸುತ್ತಿದ್ದು ಇಂದು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ನನ್ನ ಭಾಗ್ಯ ಎಂದರು.dsc_0039

ಸಭಾಕಾರ್ಯಕ್ರಮದ ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಲಾಡ್ ಪ್ರಸಾದ್ ಹೋಟೇಲಿನ ಮಾಲಕ ಬಾಬು ಎಸ್. ಶೆಟ್ಟಿ ಪೆರಾರ, ಬಂಟರ ಸಂಘ  ಜ್ಞಾನ ಮಂದಿರದ ಕಾರ್ಯಧ್ಯಕ್ಷ ಚಂದ್ರಹಾಸ ಎಂ ರೈ. ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ಉದ್ಯಮಿ ಐಕಳ ಗಣೇಶ್ ಶೆಟ್ಟಿ, ಕೇಶವ ಅಂಚನ್, ಭಾರತ್ ಬ್ಯಾಂಕ್ ನಿರ್ದೇಶಕ ಅಶೋಕ್ ಕೋಟ್ಯಾನ್, ಬಿ.ಎಸ್.ಕೆ.ಬಿ.ಯ ಅಧ್ಯಕ್ಷ ಡಾ. ಸುರೇಶ್ ರಾವ್, ಉದ್ಯಮಿ ಆನಂದ ಡಿ. ಶೆಟ್ಟಿ, ಎಕ್ಕಾರು, ನೀಲೇಶ್ ಶೆಟ್ಟಿಗಾರ್ ಕಿನ್ನಿಗೋಳಿ, ಐಕಳ ವಿಶ್ವನಾಥ ಶೆಟ್ಟಿ, ರಾಘು ಪಿ. ಶೆಟ್ಟಿ, ನಿತೀಶ್ ಶೆಟ್ಟಿ, ಜಡ್ಡಾಡಿ, ರೋಹಿತ್ ಶೆಟ್ಟಿ ನಗ್ರಿಗುತ್ತು, ಅನಿಲ್ ಶೆಟ್ಟಿ, ಏಳಿಂಜೆ, ಸಂತೋಷ್ ಶೆಟ್ಟಿ, ಕಿಲೆಂಜೂರು, ಅಶೋಕ್ ಡಿ. ಸಾಲ್ಯಾನ್, ಅಣ್ಣಿ ಸಿ. ಶೆಟ್ಟಿ, ಜಗದೀಶ್ ಸುವರ್ಣ ಪೊವಾಯಿ, ಕುಲಾಲ ಸಂಘದ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಶೇಖರ ಕೋಟ್ಯಾನ್, ವಸಯಿ, ಕೇಶವ ಅಂಚನ್ ಅಲ್ಲದೆ ಕೊಲ್ಲಿರಾಷ್ಟ್ರದಿಂದ ಆಗಮಿಸಿದ ವಾಸು ಶೆಟ್ಟಿ ಪೇಜಾವರ, ದುಬಾಯಿ, ಬಿ. ಕೆ. ಪದ್ಮರಾಜ್, ದುಬಾಯಿ, ರಾಜ್ ಕುಮಾರ್ ಬೆಹರಿನ್, ಪ್ರಭಾಕರ ಡಿ. ಸುವರ್ಣ ದುಬಾಯಿ, ರಘುನಾಥ ಎನ್. ಶೆಟ್ಟಿ ಅಭುದಾಬಿ ಅವರು ವಿಷೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.

dsc_0071
ಹಿರಿಯ ಯಕ್ಷಗಾನ ಬಾಗವತರಾದ ಬಲಿಪ ನಾರಾಯಣ ಭಾಗವತ, ಇವರನ್ನು ಬೆಳ್ಳಿಯ ಕಿರೀಟವಿಟ್ಟು ನಗದು ನೀಡಿ ಸನ್ಮಾನಿಸಲಾಯಿತು. ಇದಲ್ಲದೆ ಚೆಂಡೆ, ನೆಪತ್ಯ ಕಲಾವಿದರೂ ಸೇರಿ ಹದಿನೈದು ಮಂದಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು. ಸಂಪಾಜೆ ಶೀನಪ್ಪ ರೈ, ಸುಣ್ಣಂಬಳ ವಿಶ್ವೇಶ್ವರ ಭಟ್, ಕಡಬ ವಿನಯ ಆಚಾರ್ಯ, ರವೀಂದ್ರ ದೇವಾಡಿಗ, ಕಮಲ ಶಿಲೆ, ಪ್ರಶಾಂತ್ ಶೆಟ್ಟಿ, ಒಗೆನಾಡು, ಅಕ್ಷಯ ಕುಮಾರ್ ಮಾರ್ನಾಡ್, ಶ್ರೀಮತಿ ವಿದ್ಯಾ ಕೋಳ್ಯುರು, ಕೊಲ್ಯಾರು ರಾಜು ಶೆಟ್ಟಿ, ವಾಸುದೇವ ಮಾರ್ನಾಡ್, ಕಟೀಲು ಮೇಳದ ಬಾಬಣ್ಣ, ಸಂತೋಷ್ ಕುಮಾರ್, ಮಾನ್ಯ, ಪದ್ಮನಾಭ ಉಪಾಧ್ಯಾಯ, ಬೊಂದೆಲ್ ಸತೀಶ್ ಶೆಟ್ಟಿ, ವಾಸುದೇವ ರಂಗ ಭಟ್, ಬಾಲಕೃಷ್ಣ ಮಿಜಾರು ಇವರನ್ನು ಸನ್ಮಾನಿಸಲಾಯಿತು. ವಾದಿರಾಜ ಕಲ್ಲೂರಾಯ ಅವರು ಅಭಿನಂದನಾ ಭಾಷಣ ಮಾಡಿದರು.

dsc_0011

ಕಾರ್ಯಕ್ರಮದ ಸಂಯೋಜಕ ಪದ್ಮನಾಭ ಕಟೀಲು, ದುಬಾಯಿ ಇವರು ಅತಿಥಿಗಣ್ಯರನ್ನು ಗೌರವಿಸಿದರು. ಕಾರ್ಯಕ್ರಮವನ್ನು ಕಲಾಸಾರಥಿ ಕರ್ನೂರು ಮೋಹನ್ ರೈ ನಿರೂಪಿಸಿದರು.

dsc_0043

ಶ್ರೀ ಪೆರ್ಡೂರು ಮೇಳ, ಶ್ರೀ ಕಟೀಲಿನ ಆರೂ ಮೇಳಗಳ ಆಯ್ದ ಕಲಾವಿದರು, ಶ್ರೀ ಧರ್ಮಸ್ಥಳ ಮೇಳ, ಶ್ರೀ ಎಡನೀರು ಮೇಳ, ಶ್ರೀ ಹೊಸನಗರ ಮೇಳಗಳ ಕಲಾವಿದರ ಕೂಡುವಿಕೆಯಿಂದ ’ಸಂಪೂರ್ಣ ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು.

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್

By suddi9

Leave a Reply

Your email address will not be published. Required fields are marked *