ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಸಂದೇಶಗಳು ಸರ್ವಕಾಲಿಕವಾದದ್ದು, ಶಿಕ್ಷಣ ಮತ್ತು ಸಂಘಟನೆಯ ಮಹತ್ವವನ್ನು ಮನದಟ್ಟು ಮಾಡಿದ ನಿಜವಾದ ಸಮಾಜ ಸುಧಾರಕರು ನಾರಾಯಣ ಗುರುಗಳು ಎಂದು ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಹೇಳಿದರು.

dsc_2611

ಬಂಟ್ವಾಳ ಯುವ ವಾಹಿನಿ ವತಿಯಿಂದ ಬಿ.ಸಿ.ರೋಡಿನ ಆಶ್ರಮ ಶಾಲೆಯಲ್ಲಿ ನಡೆದ ಬ್ರಹ್ಮಶೀ ನಾರಾಯಣ ಗುರುಗಳ 162 ನೇ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವರೊಳಗೆ ಜಾತಿಧರ್ಮದ ಗೋಡೆ ಬೇಡ, ಒಂದೇ ಜಾತಿ, ಒಂದೇ ಮತ ಒಂದೇ ದೇವರು ಎಂಬ ಮಂತ್ರದ ಮೂಲಕ, ಅಸ್ಪೃಶ್ಯತೆಯ ವಿರುದ್ಧ ಶಾಂತಿಯುತ ಹೋರಾಟ ನಡೆಸಿ ಜಗತ್ತನ್ನೇ ಗೆದ್ದ, ನಾರಾಯಣ ಗುರುಗಳ ಆದರ್ಶ ನಮ್ಮೆಲ್ಲರ ಬಾಳಿಗೆ ಬೆಳಕಾಗಲಿ ಎಂದರು.ಇದೇ ವೇಳೆ ಯುವ ವಾಹಿನಿ ವತಿಯಿಂದ ಆಶ್ರಮ ಶಾಲಾ ಮಕ್ಕಳಿಗೆ ವಿತರಿಸುವ ಹಣ್ಣುಹಂಪಲು ಹಾಗೂ ಸಿಹಿತಿಂಡಿಯನ್ನು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ರವರು ಆಶ್ರಮದ ಮೇಲ್ವಿಚಾರಕರಿಗೆ ಹಸ್ತಾಂತರಿಸಿದರು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ. ಸಮಾಜ ಕಲ್ಯಾಣಾಧಿಕಾರಿ ಮೋಹನ್, ಯುವವಾಹಿನಿಯ ಸಲಹೆಗಾರ ಬಿ. ತಮ್ಮಯ್ಯ, ಅಣ್ಣು ಪೂಜಾರಿ ಪುರಸಭಾ ನಾಮನಿರ್ದೇಶಿತ ಸದಸ್ಯ ಲೋಕೇಶ್, ಸಾಮಾಜಿಕ ಕಾರ್ಯಕರ್ತ ಪದ್ಮನಾಭ ನರಿಂಗಾನ, ಬ್ರಹ್ಮಶ್ರೀ ನಾರಾಯಣ ಗುರುತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಕೋಟ್ಯಾನ್ ಕುದನೆ, ಭಾಗವಹಿಸಿದ್ದರು. ಯುವವಾಹಿನಿ ಅಧ್ಯಕ್ಷ ಅರುಣ್, ಆಶ್ರಮ ಮೇಲ್ವಿಚಾರಕ ಪ್ರಸಾದ್, ಯುವವಾಹಿನಿಯ ಪ್ರಮುಖರಾದ ಪ್ರೇಮ್‍ನಾಥ್ ಕೆ, ಭುವನೇಶ್ ಪಚ್ಚಿನಡ್ಕ, ಶ್ರೀಧರ ಅಮೀನ್, ಹರೀಶ್ ಎಸ್. ಕೋಟ್ಯಾನ್, ಕೋಶಾಧಿಕಾರಿ ಸತೀಶ್ ಪೂಜಾರಿ ಬಾಯಿಲ, ನಿತಿನ್ ಉಪಸ್ಥಿತರಿದ್ದರು. ರಾಜೇಶ್ ಸುವರ್ಣ ಸ್ವಾಗತಿಸಿದರು. ಜಯಶ್ರೀ ಕರ್ಕೇರಾ ವಂದಿಸಿದರು.

By Suddi9

Leave a Reply

Your email address will not be published. Required fields are marked *