ಬಂಟ್ವಾಳ: ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಬಂಟ್ವಾಳ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವು ಬಂಟ್ವಾಳ ತಾಲೂಕು ಕಕ್ಯಪದವು ಉಳಿ ಯುವಕ ಮಂಡಲ ಸಭಾಂಗಣದಲ್ಲಿ ಸೆ.15 ರಂದು ಜರಗಿತು.

1609pkt1

ಉಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ದೂರದರ್ಶಿತ್ವದಿಂದ ದೇಶದೆಲ್ಲೆಡೆ ಬದಲಾವಣೆಯನ್ನು ಉಂಟುಮಾಡಿದೆ. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮವು ರೈತರಿಗೆ ಪ್ರಯೋಜನಕಾರಿಯಾಗಿದೆ. ಸಮಗ್ರ ತೋಟಗಾರಿಕೆ ಬೆಳೆಗಳಿಂದ ರೈತರು ಲಾಭದಾಯಕವಾಗಿ ಕೃಷಿಯನ್ನು ಅನುಷ್ಠಾನ ಮಾಡಬಹುದು. ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಕು. ಸುನೀತಾ ನಾಯಕ್ ಅವರು ಯೋಜನೆ ನಡೆಸುವ ಕಾರ್ಯಕ್ರಮಗಳ ಬಗ್ಗೆ ಹಾಗೂ ತಾಲೂಕಿನ ಸಾಧನೆ ಬಗ್ಗೆ ತಿಳಿಸಿದರು. ಉಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಮೈರ ಅವರು ಅಧ್ಯಕ್ಷ ತೆ ವಹಿಸಿ ಮಾತನಾಡಿ ಇಂದು ಕೃಷಿಯು ಅತ್ಯಗತ್ಯವಾಗಿದ್ದು, ಯುವಕರು ಕೃಷಿಯಲ್ಲಿ ಆಸಕ್ತಿಯನ್ನು ಹೊಂದಬೇಕು, ಸಮಗ್ರ ತೋಟಗಾರಿಕಾ ಬೆಳೆಗಳ ಅನುಷ್ಠಾನದ ಮೂಲಕ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ವಿಟ್ಲ ಸಿ. ಪಿ. ಸಿ. ಆರ್. ಐ ಇದರ ಹಿರಿಯ ತಾಂತ್ರಿಕ ಅಧಿಕಾರಿ ಪುರಂದರ ಅವರು ಸಮಗ್ರ ತೋಟಗಾರಿಕಾ ಬೆಳೆಗಳ ಕುರಿತು ಗೋಷ್ಠಿ ನಡೆಸಿ ಅಡಿಕೆ ಕೃಷಿ, ತೆಂಗು ಕೃಷಿ, ಕಾಳು ಮೆಣಸು ಕೃಷಿ, ಮಾವು ಕೃಷಿ ಇತ್ಯಾದಿಗಳ ಸಮಗ್ರ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಸದಾನಂದ, ತಾಲೂಕು ಜನಜಾಗೃತಿ ವೇದಿಕೆ ಉಳಿ ಇದರ ಸದಸ್ಯ ಚಿದಾನಂದ ರೈ ಕಕ್ಯ ಅವರು ಮಾತನಾಡಿದರು. ತಾ.ಪಂ. ಸದಸ್ಯೆ ಬೇಬಿ ಕೃಷ್ಣಪ್ಪ, ಪಿಲಾತಬೆಟ್ಟು ಒಕ್ಕೂಟ ಅಧ್ಯಕ್ಷ ಮೋಹನ್ ಸಾಲ್ಯಾನ್, ಜನ ಜಾಗೃತಿ ವೇದಿಕೆಯ ವಿಶ್ವನಾಥ ಸಾಲ್ಯಾನ್ ಬಿತ್ತ, ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.  ವಗ್ಗ ವಲಯ ಮೇಲ್ವಿಚಾರಕಿ ಭವಾನಿ ಅವರು ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶೇಖರ್ ವಂದಿಸಿದರು. ಬಂಟ್ವಾಳ ಕೃಷಿ ಅಧಿಕಾರಿ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *