ವಿಟ್ಲ: ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಸಾಲೆತ್ತೂರು, ಮಂಚಿ ಮತ್ತು ಕೊಳ್ನಾಡು ಶಾಖೆಯನ್ನು ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ರವರ ಉಪಸ್ಥಿತಿಯಲ್ಲಿ ಸಾಲೆತ್ತೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.
ಅಧ್ಯಕ್ಷರಾಗಿ ಮೋನಪ್ಪ ಕೆದುಮೂಲೆ, ಉಪಾಧ್ಯಕ್ಷ ಅರುಣ್ ನಾಟೆಕಲ್, ಕಾರ್ಯದರ್ಶಿ ವಿಜಯ ಪೆರ್ಲದಬೈಲು, ಜೊತೆಕಾರ್ಯದರ್ಶಿ ಗುಲಾಬಿ ಕುಲಾಲ್, ಸಂಚಾಲಕ ವಾಸಪ್ಪ ಸೆರ್ಕಳ, ಗೌರವಾಧ್ಯಕ್ಷ ಸೇಸಪ್ಪ ನಾಯ್ಕ ಇವರನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಸಂಚಾಲಕ ಗೋಪಾಲ್ ನೇರಳಕಟ್ಟೆ, ಉಪಾಧ್ಯಕ್ಷೆ ದಿವ್ಯಾಶ್ರೀ ಕಲ್ಲಜೇರ ಅಳಿಕೆ, ಕೋಶಾಧಿಕಾರಿ ಸುಪ್ರೀತಾ ಪಿಲಿಂಜ, ಮಾಜಿ ಸಂಚಾಲಕ ವಾಸಪ್ಪ ಕಾಡುಮಠ, ಸಾಲೆತ್ತೂರು ಶಾಖೆಯ ಅಧ್ಯಕ್ಷ ಕೃಷ್ಣಪ್ಪ ಪೊದ್ದೋಟು ಹಾಗೂ ಸದಸ್ಯರು ಉಪಸ್ಥಿತರಿದ್ದರು.

