ವಿಟ್ಲ: ಜೇಸಿಐ ವತಿಯಿಂದ ನಡೆಯುವ ಸಪ್ತಾಹದ ಅಂಗವಾಗಿ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಪುತ್ತೂರಿನ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಇವರಿಂದ `ಬಾರಿಸು ಕನ್ನಡ ಡಿಂಡಿಮವ’ ಎಂಬ ಕನ್ನಡ ಭಕ್ತಿ ಭಾವಗಾನ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ವಲಯ ಪೂರ್ವಾಧ್ಯಕ್ಷ ಕೃಷ್ಣಮೋಹನ್ ಭಾಗವಹಿಸಿದ್ದರು.

4-2

4-1

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಬೊಳಂತಿಮೊಗೇರು ಶಾಲೆಯ ಸಂಜೀವ ನಾಯ್ಕ ಇವರನ್ನು ಸನ್ಮಾನಿಸಲಾಯಿತು. ಸಭಾಧ್ಯಕ್ಷತೆಯನ್ನು ಜೇಸಿಐ ಅಧ್ಯಕ್ಷ ಬಾಬು ಕೆ ವಿ ವಹಿಸಿದ್ದರು. ಪೂರ್ವಾದ್ಯಕ್ಷ ಮೋಹನ ಮೈರ ವೇದಿಕೆಯಲ್ಲಿದ್ದರು. ಅಧ್ಯಕ್ಷ ಬಾಬು ಕೆ ವಿ ಸ್ವಾಗತಿಸಿದರು. ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ವಂದಿಸಿದರು. ಅನಿಲ್ ವಡಗೇರಿ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *