ವಿಟ್ಲ: ಜೇಸಿಐ ವತಿಯಿಂದ ನಡೆಯುವ ಜೇಸಿಐ ಸಪ್ತಾಹ 2016 ಇದರ ಅಂಗವಾಗಿ `ಸ್ವಚ್ಛ ನೀರು ನೈರ್ಮಲ್ಯಕರಣ ಅಭಿಯಾನ’ ಕಾರ್ಯಕ್ರಮ ನಡೆಸಲಾಯಿತು.ವಿಟ್ಲದ ಪ್ರಸಿದ್ಧ ಕೋಟಿಕೆರೆ ಪರಿಸರದಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿಯವರು ಉದ್ಘಾಟಿಸಿದರು.
ವಿಟ್ಲ ಜೇಸಿಐ ಪೂರ್ವಾಧ್ಯಕ್ಷರುಗಳಾದ ಮೋಹನ ಮೈರ, ಭಾಸ್ಕರ ಶೆಟ್ಟಿ, ಅಣ್ಣಪ್ಪ ಸಾಸ್ತಾನ, ಆರ್ ಎಸ್ ಎಂಟರ್‍ಪ್ರೈಸಸ್ ನ ಲಕ್ಷ್ಮಣ್ ಮತ್ತು ಎನ್ ಎಸ್ ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೇಸಿಐ ಅಧ್ಯಕ್ಷ ಬಾಬು ಕೆ. ವಿ.ಸ್ವಾಗತಿಸಿದರು. ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ವಂದಿಸಿದರು.


