ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್‍ನ ಮನವಿಯ ಮೇರೆಗೆ ವಿಟ್ಲದ ಶಾಲಾ ರಸ್ತೆಯಲ್ಲಿ ವಿಟ್ಲ ಜೆಸಿಐ ಅಧ್ಯಕ್ಷ ಬಾಬು ಕೆ ವಿ ಯವರು ನಿರ್ಮಿಸಿದ ಪ್ರಯಾಣಿಕರ ತಂಗುದಾಣದ ಉದ್ಘಾಟಣೆ ಮತ್ತು ಪಂಚಾಯತ್‍ಗೆ ಹಸ್ತಾಂತರ ಕಾರ್ಯಕ್ರಮವು ವಿಟ್ಲ ಜೇಸಿಐ ಸಪ್ತಾಹದ ಆಚರಣೆ ಸಂದರ್ಭದಲ್ಲಿ 10-09-2016 ರಂದು ನಡೆಯಿತು.ತಂಗುದಾಣದ ಉದ್ಘಾಟನೆಯನ್ನು ವಲಯ 15ರ ಅಧ್ಯಕ್ಷ ಸಂದೀಪ್ ಕುಮಾರ್ ನೆರವೇರಿಸಿದರು.

bus-stand-1

bus-stand-2

ಮುಖ್ಯ ಅತಿಥಿ ಸದಾನಂದ ನಾವಡ ರವರು ಪಟ್ಟಣ ಪಂಚಾಯತ್‍ನ ಸದಸ್ಯರೊಂದಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ರವರಿಗೆ ಹಸ್ತಾಂತರಿಸಿದರು. ಹಸ್ತಾಂತರ ಸ್ವೀಕರಿಸಿದ ರವಿಪ್ರಕಾಶ್ ಜೇಸಿಐ ಅಧ್ಯಕ್ಷ ಬಾಬು ಕೆ ವಿ ಮತ್ತು ಎಲ್ಲಾ ಸದಸ್ಯರಿಗೆ ಪಂಚಾಯತ್‍ನ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಬಾಬು ಕೆ. ವಿ. ಸ್ವಾಗತಿಸಿದರು. ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ವಂದಿಸಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಸದಸ್ಯರು, ಜೆಸಿಐ ಪೂರ್ವಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *