ಬಂಟ್ವಾಳ, : ಜಾತಿ ಧರ್ಮದ ಎಲ್ಲೆಯನ್ನು ಮೀರಿ ಮಾಡುವ ದಾನವೇ ರಕ್ತದಾನ. ದಾನಗಳಲ್ಲಿ ಅತೀ ಶ್ರೇಷ್ಠವಾದ ದಾನವೇ ಇದಾಗಿದೆ. ಪ್ರತಿ ಮನುಷ್ಯನ ದೇಹದಲ್ಲಿ ಹರಿಯುತ್ತಿರುವ ರಕ್ತಕ್ಕೆ ಯಾವುದೇ ಜಾತಿ, ಧರ್ಮ, ಬೇಧವಿಲ್ಲ ಎಂದು ಮಂಗಳೂರಿನ ದೇರಳಕಟ್ಟೆ ಎಬಿ ಶೆಟ್ಟಿ ಮೆಡಿಕಲ್ ಕಾಲೇಜಿನ ಉಪನ್ಯಾಸಕ, ಲೇಖಕ ಡಾ ಮುರಳಿ ಮನೋಹರ ಚುಂತಾರು ಹೇಳಿದರು.

ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ರೆಡ್‍ಕ್ರಾಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಅಂತರಾಷ್ಟ್ರೀಯ ಮಾನವೀಯ ಸೇವಾ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಯುದ್ಧ ಸಮಯದಲ್ಲಿ ಗಾಯಗೊಂಡ ಸೈನಿಕರಿಗೆ, ನೈಸರ್ಗಿಕ ವಿಪತ್ತು ವಿಕೋಪಗಳು ಸಂಭವಿಸಿದಾಗ ಪರಿಹಾರ ಕಾರ್ಯದಲ್ಲಿ ಹಾಗೂ ಸಾರ್ವಜನಿಕರಿಗೆ ಸೇವೆ ಮಾಡುವ ಸೇವಾ ಸಂಸ್ಥೆಯಾಗಿದೆ. ಈ ಘಟಕದ ನೇತೃತ್ವದಲ್ಲಿ ರಚನೆಯಾಗಿರುವ ಒಂದು ಕಾರ್ಯಕ್ರಮ ಅಂದರೆ ರಕ್ತದಾನ.ಯಾರು ರಕ್ತದಾನ ಮಾಡಲು ಅರ್ಹತೆ ಹೊಂದಿದ್ದಾರೆ, ರಕ್ತದಾನಕ್ಕಿಂತ ಮೊದಲು ಪ್ರಮುಖವಾದ ಮುಂಜಾಗೃತೆಗಳನ್ನು ತೆಗೆದುಕೊಳ್ಳುವ ಬಗ್ಗೆ ಎಚ್ಚರಿಕೆಯ ವಿಚಾರವನ್ನು ವ್ಯಕ್ತಪಡಿಸಿದರು.
ರಕ್ತ ದಾನದಿಂದ ಆಗುವ ಪ್ರಯೋಜನಗಳಾದ ಹೊಸ ರಕ್ತದ ಉತ್ಪತಿ,್ತ ರಕ್ತದಲ್ಲಿನ ಕೊಬ್ಬು ಕಡಿಮೆಯಾಗುತ್ತದೆ, ಕಾರ್ಯ ತತ್ಪರತೆ, ಜ್ನ್ಯಾಪಕ ಶಕ್ತಿಯ ವೃದ್ಧಿ, ಹೃದಯಾಘಾತವನ್ನು ತಡೆಯಲು ಪರಿಣಾಮ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು, ಸಾರ್ಥಕತೆ, ಸಂತೃಪ್ತಿಯಾಗುತ್ತದೆ ಎಂದು ತಿಳಿಸಿದರು.

dscn0674

dscn0683
ಸಣ್ಣ ಕೆಲಸವನ್ನು ಪ್ರೀತಿಯಿಂದ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಮಾಡಬೇಕು.ಇಂದಿನ ಇಂಗ್ಲೀಷ್ ಯುಗದಲ್ಲಿ ವಿದ್ಯಾರ್ಥಿಗಳು ಜೀವನ ಶಿಕ್ಷಣವನ್ನು ಕಲಿಯಬೇಕು. ಪುಸ್ತಕದಿಂದ ಸಿಗುವ ಜ್ಞಾನಕ್ಕಿಂತ ಹೊರಪ್ರಪಂಚದ ಜ್ಞಾನವನ್ನು ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್‍ನ ಮಾಜಿ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್ ವಹಿಸಿದರು
ವೇದಿಕೆಯಲ್ಲಿ ಡಾ| ಪ್ರಭಾಕರ ಭಟ್ ಕಲ್ಲಡ್ಕ, ವಸಂತ ಮಾಧವ, ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಾಯಿಪ್ರಸಾದ್ ಸ್ವಾಗತಿಸಿ, ಆಶಾಲತಾ ವಂದಿಸಿ. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸ್ವರ್ಣಕೀರ್ತಿ ನಿರೂಪಿಸಿದರು. ಕಾಲೇಜಿನ ಪ್ರಣವ ವಿದ್ಯಾರ್ಥಿ ಸಂಘ ಮತ್ತು ಪ್ರತಾಪ ಕ್ರೀಡಾ ಸಂಘವು ಕಾರ್ಯಕ್ರಮವನ್ನು ಆಯೋಜಿಸಿತ್ತು.

By Suddi9

Leave a Reply

Your email address will not be published. Required fields are marked *