ವಿಟ್ಲದಲ್ಲಿ ನೂತನವಾಗಿ ಪ್ರಾರಂಭಗೊಂಡ ಕಾಂಚನ ಹೋಂಡಾ ನಾಲ್ಕನೇ ಅಧಿಕೃತ ಸೇವಾಕೇಂದ್ರವನ್ನು ವಿಟ್ಲ ವೆಂಕಟೇಶ್ವರ ಪ್ರೊಸ್ಸೆಸರ್ಸ್‍ನ ಮಾಲಕ ಸುಬ್ರಾಯ ಪೈ ಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಕಟ್ಟಡದ ಮಾಲಕ ಎಡ್ವರ್ಡ್ ರೇಗೋ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಸುಮಿತ್ರಾ ಭಾಗವಹಿಸಿದ್ದರು. ಕಾಂಚನ ಗ್ರೂಪ್ ಆಫ್ ಕಂಪನೀಸ್‍ನ ಆಡಳಿತ ನಿರ್ದೇಶಕ ಪ್ರಸಾದ್ ರಾಜ್ ಕಾಂವನ್ ಸ್ವಾಗತಿಸಿ ಪ್ರಸ್ತಾವಿಸಿದರು. ಉಮೇಶ ವಂದಿಸಿದರು. ಈ ಸಂದರ್ಭದಲ್ಲಿ ಪ್ರಥಮ ಗ್ರಾಹಕ ರುಹಾನ್ ಖಾನ್ ರವರಿಗೆ ಕೀ ಹಸ್ತಾಂತರಿಸಲಾಯಿತು.




