ಉಡುಪಿ:- ಸಾಮಾಜಿ ಕಳಕಳಿಯುಳ್ಳ ಸಂಸ್ಥೆಗಳು ಗುರು ಹಿರಿಯರನ್ನು ಅಭಿನಂದಿಸುವ ಉತ್ತಮ ಕಾರ್ಯ ಮಾಡಿದಾಗ ಧನ್ಯತಾ ಭಾವ ದೊಂದಿಗೆ ಸಂತಸ ತರುತ್ತದೆ ಎಂದು ನಿವೃತ್ತ ಶಿಕ್ಷಕಿ ಶಾಲಿನಿ ಮಲ್ಪೆ ಹೇಳಿದರು.ಅವರು ಮಲ್ಪೆ ಕೊಡವೂರು ರೋಟರಿಯ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ( ಸೆ.5 ರಂದು ನಡೆದ) ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರೋಟರಿ ಅದ್ಯಕ್ಷ ಪ್ರಭಾತ್ ಕೋಟ್ಯಾನ್ ಸ್ವಾಗತಿಸಿದರು.,ಪೂರ್ಣಿಮಾ ಜನಾರ್ಧನ್ ಸನ್ಮಾನ ಪತ್ರ ವಾಚಿಸಿದರು.ಮಾಜಿ ಸಹಾಯಕ ಗವರ್ನರ್ ಮಹೇಶ್ ಕುಮಾರ್ ವಂದಿಸಿದರು.ಈ ಸಂದರ್ಭದಲ್ಲಿ ಜನಾರ್ಧನ್ ಕೊಡವೂರು,ರಾಘವೇಂದ್ರ ಪ್ರಭು ಕರ್ವಾಲು,ಯಶೋಧ ಕೇಶವ್,ವಿಜಯ ಬಂಗೇರ,ಚಂದ್ರಕಾಂತ್,ಕೇಶವ ಕುಂದರ್,ಮುಂತಾದವರು ಭಾಗವಹಿಸಿದ್ದರು.

