ಬಂಟ್ವಾಳ: ಜೀವ ವಿಮಾ ನಿಗಮ ಬಿ.ಸಿ.ರೋಡ್ ಶಾಖೆಯಲ್ಲಿ 60ನೇ ವರ್ಷದ ವಿಮಾ ಸಪ್ತಾಹದ ಉದ್ಘಾಟನೆಯನ್ನು ಪ್ರಥಮ ಪಾಲಿಸಿದಾರರಾದ ಸಹ್ಯಾದ್ರಿ ಕಾಲೇಜಿನ ಪ್ರೊಫೆಸರ್ ಬಾಲಕೃಷ್ಣ ನೆರವೇರಿಸಿದರು. ಪ್ರಥಮ ಪಾಲಿಸಿದಾರರಾದ ಸಿರಿಲ್, ರಾಘವಾಚಾರ್ಯ, ಹಿರಿಯ ಶಾಖಾಧಿಕಾರಿ ಬಾಲಕೃಷ್ಣ ಡಿ. ಅಧಿಕಾರಿಗಳಾದ ಶಶಿಕುಮಾರ್, ಸುರೇಶ್, ಮೋಹನ್ , ರ ವೀಂದ್ರನಾಥ್, ಧನಸಿಂಗ್ , ರಾಜಶೇಖರ ,ಮಧುಸೂದನ್,ರಾಮಯ್ಯ ಶೆಟ್ಟಿ, ಇಂದ್ರೇಶ್ ಮತ್ತು ಶಾಖಾ ಸಿಬ್ಬಂದಿಗಳು , ಅಭಿವೃದ್ಧಿ ಅಧಿಕಾರಿಗಳು , ಪ್ರತಿನಿಧಿ ಗಳು ಸಾರ್ವಜನಿಕರು ಉಪಸ್ಥಿತರಿದ್ದರು.
